ಜಿಲ್ಲಾ ಉಸ್ತುವಾರಿ ಬದಲಾವಣೆಗೆ ಬೆಂಬಲಿಗರ ಆಕ್ರೋಶ: ಪ್ರತಿಭಟನೆ ಬೇಡ ಎಂದ ಸಚಿವ ಆನಂದ್ ಸಿಂಗ್ ‌ಮನವಿ

ಹೊಸದಿಗಂತ ವರದಿ, ವಿಜಯನಗರ: ‌

ನೂತನ ಜಿಲ್ಲೆಯ ಪ್ರಮುಖ ರೂವಾರಿ ಪರಿಸರ, ಜೀವಿಶಾಸ್ತ್ರ, ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್ ಅವರ ಜಿಲ್ಲಾ ಉಸ್ತುವಾರಿ ಬದಲಾವಣೆ ಕ್ರಮ ಖಂಡಿಸಿ ಇಲ್ಲಿನ ಭಾಜಪ ಕಾರ್ಯಕರ್ತರು ಹಾಗು ಬೆಂಬಲಿಗರು ನಗರದ ಶಾನ್ ಬಾಗ್ ವೃತ್ತದಲ್ಲಿ ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಆನಂದ್ ಸಿಂಗ್ ಅವರನ್ನು ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಬದಲಾಯಿಸಿ ಕೊಪ್ಪಳ ಜಿಲ್ಲಾ ಉಸ್ತುವಾರಿ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ನಗರದ ಶಾನ್ ಬಾಗ್ ವೃತ್ತದಲ್ಲಿ ಜಮಾಯಿಸಿ ಟೈರ್ ಗೆ‌ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಜನ ನಾಯಕ, ನೂತನ ಜಿಲ್ಲೆಯ ರೂವಾರಿ ಆನಂದ್ ಸಿಂಗ್ ಅವರನ್ನು ದಿಢೀರನೆ ಜಿಲ್ಲಾ ಉಸ್ತುವಾರಿ ‌ಬದಲಾಯಿಸಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ‌ನಿಡಿರುವುದು ಸರಿಯಲ್ಲ, ರಾಜ್ಯದಲ್ಲೇ ಮಾದರಿಯಾಗುವ ಅಭಿವೃದ್ಧಿ ‌ಕೆಲಸಗಳನ್ನು ಮಾಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ, ಇದು ಮುಂಬರುವ ಚುನಾವಣೆಗೆ ಅನುಕೂಲವಾಗಲಿದೆ, ಕಾಂಗ್ರೆಸ್ ವಶದಲ್ಲಿದ್ದ ನಗರಸಭೆಯನ್ನು ಭಾಜಪ ವಶಕ್ಕೆ ತರುವ ‌ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಚುನಾವಣೆಯಲ್ಲಿ ಕಡಿಮೆ ಸ್ಥಾನ ‌ಪಡೆದರೂ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರಸಭೆಯಲ್ಲಿ ಬಿಜೆಪಿ ‌ಬಾವುಟ ಹಾರಿಸಿದ್ದಾರೆ. ಇಂತಹ ಜನಮೆಚ್ಚಿದ ನಾಯಕರನ್ನು ನಮ್ಮ ಜಿಲ್ಲೆಯಿಂದ ದೂರ ‌ಮಾಡಿದರೇ ಪಕ್ಷಕ್ಕೆ ಭಾರಿ ಹೊಡೆತ‌ ಬೀಳಲಿದೆ, ಸರ್ಕಾರ ಕೂಡಲೇ ಆದೇಶ ಹಿಂಪಡೆದು, ವಿಜಯನಗರ ಜಿಲ್ಲೆಯ ಉಸ್ತುವಾರಿ ಯನ್ನೇ ನೀಡಬೇಕು ಎಂದು ‌ಬೆಂಬಲಿಗರು ಒತ್ತಾಯಿಸಿದರು.

ಪ್ರತಿಭಟನೆ ಬೇಡ ಎಂದ‌‌ ಆನಂದ್ ಸಿಂಗ್ ‌ಮನವಿ: ಸಚಿವ ಆನಂದ್ ಸಿಂಗ್ ಜಿಲ್ಲಾ ಉಸ್ತುವಾರಿ ಬದಲಾವಣೆ ಖಂಡಿಸಿ ಬೆಂಬಲಿಗರು ಪ್ರತಿಭಟನೆ ‌ಮಾಡುವ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್ ಅವರು ಸಿನಿಮೀಯ ರೀತಿಯಲ್ಲಿ ‌ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಟೈರ್ ಗೆ ಬೆಂಕಿ ಹಚ್ವಿ ಆಕ್ರೋಶ ವ್ಯಕ್ತಪಡಿಸಿದ್ದಕ್ಕೆ ಕೊಪಗೊಂಡು, ಕೂಡಲೇ ಪ್ರತಿಭಟನೆ ಕೈಬಿಡಿ ಎಂದು ಮನವಿ ಮಾಡಿದರು. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ‌ಕರೆ‌ಮಾಡಿ ಬೆಂಕಿ ‌ನಂದಿಸುವ ವಾಹನ ತರೆಸಿ ನಂದಿಸಿ ಗಮನಸೆಳೆದರು. ನಂತರ ಮಾತಮಾಡಿದ ಅವರು, ಇವೆಲ್ಲ ತಾಂತ್ರಿಕ ಸಮಸ್ಯೆಗಳು, ನಾನು ಒಪ್ಪಿದ ಮೇಲೆಯೇ ಜಿಲ್ಲಾ ಉಸ್ತುವಾರಿ ಬದಲಾವಣೆಯಾಗಿದೆ. ಎಲ್ಲವನ್ನೂ ಹೊರಗಡೆ ಹೇಳೋಕೆ ಆಗೋಲ್ಲ ಎಂದು ಅಭಿಮಾನಿಗಳನ್ನು ಸಂತೈಸಿದರು. ಆದರೂ ಬೆಂಬಲಿಗರು ಸಮಾಧಾನವಾಗದೇ ಸ್ಥಳದಿಂದ ಕಾಲ್ಕಿತ್ತಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!