ಡೇಟಾ ಸಂರಕ್ಷಣಾ ಮಸೂದೆ ಪರಿಷ್ಕರಣೆ: ಸಂಸ್ಥೆಗಳು ಸುರಕ್ಷತೆಯನ್ನು ಹೊಂದಿಲ್ಲದಿದ್ದರೆ 200 ಕೋಟಿ ರೂ.ವರೆಗೆ ದಂಡ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗ್ರಾಹಕರ ವೈಯುಕ್ತಿಕ ಡೇಟಾದೊಂದಿಗೆ ವ್ಯವಹರಿಸುವ ಕಂಪನಿಗಳು ಇನ್ಮುಂದೆ ಡೇಟಾ ಉಲ್ಲಂಘನೆಯನ್ನು ತಡೆಯಲು ಸಮಂಜಸವಾದ ಸುರಕ್ಷತೆಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾದರೆ 200 ಕೋಟಿ ರೂಪಾಯಿಗಳವರೆಗೆ ದಂಡ ಪಾವತಿಸಬೇಕಾಗಬಹುದು. ಏಕೆಂದರೆ ಡೇಟಾ ಸಂರಕ್ಷಣಾ ಮಸೂದೆಯ ಪರಿಷ್ಕೃತ ಆವೃತ್ತಿ ಜಾರಿಗೆ ತರಲು ಯೋಚಿಸಲಾಗಿದ್ದು ಇದರಡಿಯಲ್ಲಿ ಗ್ರಾಹಕರ ಡೇಟಾವನ್ನು ಸಂರಕ್ಷಿಸಲು ವಿಫಲವಾದ ಕಂಪನಿಗಳು ದಂಡ ಪಾವತಿಸಬೇಕಾಗುತ್ತದೆ.

ಲಭ್ಯವಿರುವ ಮಾಹಿತಿಯ ಪ್ರಕಾರ, ಈ ರೀತಿಯ ಪ್ರಕರಣಗಳಲ್ಲಿ ದಂಡವಿಧಿಸುವ ಅಥವಾ ಕಂಪನಿಗಳಿಗೆ ವಿಚಾರಣೆಗೆ ಅವಕಾಶ ನೀಡುವ ಅಧಿಕಾರವನ್ನು ದತ್ತಾಂಶ ಸಂರಕ್ಷಣಾ ಮಂಡಳಿಗೆ ನೀಡಲಾಗಿದೆ. ಈ ಮಂಡಳಿಯು ಮಸೂದೆಯ ನಿಬಂಧನೆಗಳನ್ನು ಜಾರಿಗೊಳಿಸಲು ಪ್ರಸ್ತಾಪಿತವಾದ ಮಂಡಳಿಯಾಗಿದೆ.

ಡೇಟಾ ನಿಯಮ ಉಲ್ಲಂಘನೆಯ ಸ್ವರೂಪದ ಆಧಾರ ಮೇಲೆ ದಂಡಗಳು ಬದಲಾಗುತ್ತವೆ ಎನ್ನಲಾಗಿದೆ. ನಿಯಮಗಳ ಅಡಿಯಲ್ಲಿ ಡೇಟಾ ಉಲ್ಲಂಘನೆಯಿಂದ ಪ್ರಭಾವಿತವಾಗಿರುವ ಜನರಿಗೆ ತಿಳಿಸಲು ವಿಫಲವಾದ ಕಂಪನಿಗಳಿಗೆ ಸುಮಾರು 150 ಕೋಟಿ ರೂ. ದಂಡ ವಿಧಿಸಬಹುದಾಗಿದೆ. ಈ ಹಿಂದಿನ ಮಸೂದೆಯಲ್ಲಿ ದಂಡವು ಕಂಪನಿಯ ವಾರ್ಷಿಕ ವಹಿವಾಟಿನ ಶೇಕಡಾ 4ರಷ್ಟು ಅಥವಾ 15 ಕೋಟಿ ರೂ. ಇವೆರಡರಲ್ಲಿ ಯಾವುದು ಹೆಚ್ಚೋ ಅದು ಎಂದು ಪ್ರಸ್ತಾಪಿಸಲಾಗಿತ್ತು.

ಆಂತರಿಕವಾಗಿ ‘ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್’ ಎಂದು ಉಲ್ಲೇಖಿಸಲಾದ ಪರಿಷ್ಕೃತ ಮಸೂದೆಯನ್ನು ಅಂತಿಮಗೊಳಿಸಲು ಸರ್ಕಾರವು ಚಿಂತಿಸುತ್ತಿದ್ದು ಈ ವಾರ ಅಂತಿಮ ಕರಡು ಆವೃತ್ತಿಯೊಂದಿಗೆ ಹೊರಬರುತ್ತದೆ ಎನ್ನಲಾಗಿದೆ. ಹೊಸ ಮಸೂದೆಯು ವೈಯಕ್ತಿಕ ಡೇಟಾದ ಸುತ್ತಲಿನ ಸುರಕ್ಷತೆಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ ಮತ್ತು ಅದರ ವ್ಯಾಪ್ತಿಯಿಂದ ವೈಯಕ್ತಿಕವಲ್ಲದ ಡೇಟಾವನ್ನು ಹೊರತುಪಡಿಸಲಾಗಿದೆ ಎಂದು ತಿಳಿದುಬಂದಿದೆ. ವೈಯಕ್ತಿಕವಲ್ಲದ ಡೇಟಾ ಎಂದರೆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಲು ಸಾಧ್ಯವಾಗದ ಯಾವುದೇ ಡೇಟಾ ಎಂದು ಸರಳೀಕರಿಸಬಹುದು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!