Sunday, June 4, 2023

Latest Posts

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಆರು ಬಾರಿ ಕಂಪಿಸಿದ ಭೂಮಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಭಾನುವಾರ ಮಧ್ಯಾಹ್ನದಿಂದ ಇಂದು ಬೆಳಗಿನ ಜಾವದವರೆಗೆ ಆರು ಬಾರಿ ಭೂಮಿ ಕಂಪಿಸಿದೆ. ಬರೋಬ್ಬರಿ ಆರು ಬಾರಿ ಭೂಕಂಪನದ ಅನುಭವವಾಗಿದ್ದು, ಜನರಲ್ಲಿ ಆತಂಕ ಮೂಡಿದ್ದು, ಭಯಭೀತರಾಗಿದ್ದಾರೆ.

 

ಕ್ಯಾಂಪ್‌ಬೆಲ್ ಕೊಲ್ಲಿಯಲ್ಲಿ ನಸುಕಿನ ಜಾವ 2.26 ರ ಸಮಯದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.6 ರಷ್ಟು ತೀವ್ರತೆ ಕಾಣಿಸಿದೆ. ಇದಕ್ಕೂ ಒಂದು ಗಂಟೆಗೆ ಮುನ್ನ ಡಿಗ್ಲಿಪುರ್ ಭಾಗದಲ್ಲಿ ಭೂಮಿ ಕಂಪಿಸಿದೆ. ನಸುಕಿನ ಜಾವ 1.07 ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಶೇ. 3.9 ರಷ್ಟು ತೀವ್ರತೆ ದಾಖಲಾಗಿದೆ. ಇದಕ್ಕೂ ಮುನ್ನ ಐದು ಗಂಟೆ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪನ ಸಂಭವಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!