ಪೊಲೀಸ್ ಠಾಣೆಯಲ್ಲಿ ಭಾರೀ ಸ್ಫೋಟ: ಪೊಲೀಸರ ನಿರ್ಲಕ್ಷ್ಯವೇ ಕಾರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ತೂರು ಜಿಲ್ಲೆಯ ಗಂಗಾಧರ ನೆಲ್ಲೂರು ಪೊಲೀಸ್ ಠಾಣೆ ಮುಂದೆ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಭಾರೀ ಸ್ಫೋಟ ಸಂಭವಿಸಿದೆ. ಜೂನ್ 2018 ರಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಗನ್ ಪೌಡರ್ ಅನ್ನು ವಶಪಡಿಸಿಕೊಂಡು ಅದನ್ನು ಪೊಲೀಸ್ ಠಾಣೆ ಆವರಣದಲ್ಲಿರುವ ಆಲದ ಮರದ ಕೆಳಗೆ ಹೂತಿಡಲಾಗಿತ್ತು. ಅದೇ ಗನ್‌ ಪೌಡರ್‌ ಸ್ಫೋಟಗೊಂಡಿದೆ ಎಂದು ಎಸ್‌ಪಿ ತಿಳಿಸಿದರು. ಈ ಸ್ಫೋಟದಿಂದ ಜನರಿಗಾಗಲಿ, ಪೊಲೀಸ್ ಸಿಬ್ಬಂದಿಗಾಗಲಿ ಯಾವುದೇ ಹಾನಿ ಉಂಟಾಗಿಲ್ಲ.

ಸ್ಫೋಟದ ಸದ್ದು ಕೇಳಿ ಸುತ್ತಮುತ್ತಲಿನ ಜನ ಭಯಭೀತರಾಗಿ ಸ್ಥಳಕ್ಕೆ ಓಡಿಬಂದರು. ಮಾಹಿತಿ ಬಂದ ಕೂಡಲೇ ಉನ್ನತಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಸ್ಫೋಟ ಹೇಗೆ ಸಂಭವಿಸಿತು ಎಂದು ವಿಚಾರಿಸಿದಾಗ, ಜೂನ್ 2018 ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಂಡ ಗನ್ ಪೌಡರ್ ಅನ್ನು ಆಲದ ಮರದ ಕೆಳಗೆ ಹೂತಿಡಲಾಗಿದೆ ಎಂದು ಎಸ್ಪಿ ಹೇಳಿದರು.

ಸ್ಫೋಟದ ಸಮಯದಲ್ಲಿ ಇಬ್ಬರು ಸಿಬ್ಬಂದಿ ಪೊಲೀಸ್‌ ಠಾಣೆಯಲ್ಲಿ ರಾತ್ರಿ ಕರ್ತವ್ಯದಲ್ಲಿದ್ದರು. ಸ್ಪೋಟದ ತೀವ್ರತೆಗೆ ಒಡೆದ ಕಿಟಕಿಯ ಗಾಜಿನ ಚೂರುಗಳು ಅವರ ಮೇಲೆ ಬಿದ್ದು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!