ಡೇಟಿಂಗ್‌ನಲ್ಲಿ ವಿಜಯ್-ರಶ್ಮಿಕಾ?: ಮಾಲ್ಡೀವ್ಸ್‌ಗೆ ಹಾರಿದ ಜೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಗೀತ ಗೋವಿಂದಂ ಚಿತ್ರದ ಮೂಲಕ ಲವ್ಲಿ ಪೇರ್ ಎಂದು ಗುರುತಿಸಿಕೊಂಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ಲವ್‌ ಬರ್ಡ್ ಎಂಬ ಕಥೆಗಳು ಕೇಳಿ ಬರುತ್ತಿವೆ. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ್ದ ಇವರಿಬ್ಬರ ನಡುವೆ ಉತ್ತಮ ಗೆಳೆತನ ಬೆಳೆದು ಅದು ಸ್ವಲ್ಪಮಟ್ಟಿಗೆ ಪ್ರೇಮಕ್ಕೆ ತಿರುಗಿತ್ತು ಎಂಬುದನ್ನು ಕೆಲ ದಿನಗಳಿಂದ ಕೇಳುತ್ತಲೇ ಇದ್ದೇವೆ.

ಸದ್ಯ ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಮಾನಿಗೆ ಪುಷ್ಠಿ ನೀಡುವಂತೆ ನಿನ್ನೆ ಈ ಇಬ್ಬರೂ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಶುಕ್ರವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ರೌಡಿ ಬಾಯ್ ವಿಜಯ್ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ.

ವಿಜಯ್-ರಶ್ಮಿಕಾ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ಇತ್ತೀಚೆಗಷ್ಟೇ ರಶ್ಮಿಕಾ ಕೂಡ ವಿಜಯ್ ಅಭಿನಯದ ‘ಲೈಗರ್’ ಸಿನಿಮಾ ತನಗೆ ವೈಕ್ತಿಕವಾಗಿ ಇಷ್ಟವಾಗಿದ್ದು, ಶಿಳ್ಳೆ ಹೊಡೆಯುತ್ತಾ ಸಿನಿಮಾ ನೋಡಿದ್ದೇನೆ ಎಂದು ಮಾಧಯಮದ ಮುಂದೆ ಹೇಳಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!