ಎಪಿಯಲ್ಲಿ ಮತ್ತೆ ಹೆಸರು ಬದಲಾವಣೆ ವಿವಾದ: ರಾತ್ರೋರಾತ್ರಿ ಆಸ್ಪತ್ರೆಯ ಹೆಸರು ಬದಲಾಯಿಸಿದ ಜಗನ್ ಸರ್ಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಎಪಿಯಲ್ಲಿ ವಿಜಯವಾಡದ ಎನ್‌ಟಿಆರ್ ಆರೋಗ್ಯ ವಿಶ್ವವಿದ್ಯಾಲಯದ ಹೆಸರು ಬದಲಾವಣೆ ವಿಚಾರವೇ  ಇನ್ನೂ ಇತ್ಯರ್ಥಗೊಂಡಿಲ್ಲ. ಈ ನಡುವೆ ವೈಸಿಪಿ ಸರ್ಕಾರ ಮತ್ತೊಂದು ಹೆಸರು ಬದಲಾವಣೆ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ವಿಜಯನಗರ ಜಿಲ್ಲೆಯಲ್ಲಿ ಶ್ರೀಮಂತ ಇತಿಹಾಸ ಹೊಂದಿರುವ ವಿಜಯನಗರ ಜಿಲ್ಲಾ ಮಹಾರಾಜ ಆಸ್ಪತ್ರೆ ಹೆಸರನ್ನು ಜಿಲ್ಲಾ ಕೇಂದ್ರ ಆಸ್ಪತ್ರೆಯಾಗಿ ಬದಲಾಯಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಈ ನಿರ್ಧಾರವನ್ನು ವಿಜಯನಗರ ಜಿಲ್ಲೆಯ ಜನತೆ ಟೀಕಿಸುತ್ತಿದ್ದು, ಕೂಡಲೇ ಸರ್ಕಾರ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಜಿಲ್ಲೆಯ ನಿವಾಸಿಗಳು ಆಗ್ರಹಿಸಿದ್ದಾರೆ.

ರಾತ್ರೋರಾತ್ರಿ ಹಳೆಯ ಬೋರ್ಡ್ ತೆಗೆದು ಹೊಸ ಬೋರ್ಡ್ ಅಳವಡಿಸಲಾಗಿದೆ. ಆಸ್ಪತ್ರೆಯ ಹೆಸರು ಬದಲಾವಣೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಜಗನ್ ಸರ್ಕಾರ ಇಂತಹ ಹುಚ್ಚುತನವನ್ನು ಮಾಡುತ್ತಿದೆ ಎಂದು ಪ್ರತಿಭಟಿಸುತ್ತಿದ್ದಾರೆ. ಹೊಸ ಹೆಸರನ್ನು ತೆಗೆದು ಹಳೆ ಹೆಸರಲ್ಲೇ ಆಸ್ಪತ್ರೆ ಮುಂದುವರಿಸುವಂತೆ ಆಗ್ರಹಿಸುತ್ತಿದ್ದಾರೆ. ಸುದೀರ್ಘ ಇತಿಹಾಸ ಹೊಂದಿರುವ ಮಹಾರಾಜ ಆಸ್ಪತ್ರೆಯ ಹೆಸರನ್ನು ಬದಲಾಯಿಸಿರುವ ಜಗನ್ ಸರ್ಕಾರದ ವಿರುದ್ಧ ಟಿಡಿಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾರಾಜ ಸೆಂಟ್ರಲ್ ಹಾಸ್ಪಿಟಲ್ ಹೆಸರಿಗೆ ಬದಲಾಗಿ ಸರ್ಕಾರಿ ಜನರಲ್ ಆಸ್ಪತ್ರೆ ಎಂಬ ಬೋರ್ಡ್ ಬಂದಿದೆ. ಬೆಳಗ್ಗೆ ಆಸ್ಪತ್ರೆಗೆ ತೆರಳಿದ ರೋಗಿಗಳು ಹಾಗೂ ಜನರು ಒಮ್ಮೆ ಇದು ಅದೇ ಆಸ್ಪತ್ರೆನಾ ಎಂಬ ಗೊಂದಲಕ್ಕೆ ಒಳಗಾದರು. ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರು ಆಸ್ಪತ್ರೆ ತಲುಪಿ ಪ್ರತಿಭಟನೆ ನಡೆಸಿದರು. ಸರ್ಕಾರದ ನಡೆ ಜನಸೇವೆ ಮಾಡಿದ ಮಹಾರಾಜರ ವಂಶಕ್ಕೆ ಅಪಮಾನ ಮಾಡುವಂತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!