Sunday, November 27, 2022

Latest Posts

ದುಷ್ಕರ್ಮಿಗಳಿಂದ ಬಾಂಗ್ಲಾದೇಶದ ಹಿಂದೂ ದೇವಾಲಯದಲ್ಲಿ ದೇವತೆಯ ವಿಗ್ರಹ ಧ್ವಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಪರಿಚಿತ ದುಷ್ಕರ್ಮಿಗಳು ಬಾಂಗ್ಲಾದೇಶದ ಜೆನೈದಾದಲ್ಲಿರುವ ಹಿಂದೂ ದೇವಾಲಯದಲ್ಲಿ ದೇವತೆಯ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ,ಈ ಕೃತ್ಯ ಎಸಗಿದ ವಿಧ್ವಂಸಕರಿಗಾಗಿ ಪೊಲೀಸರು ಬೇಟೆ ಶುರು ಮಾಡಿದ್ದಾರೆಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ದೌತಿಯಾ ಗ್ರಾಮದ ಕಾಳಿ ದೇವಸ್ಥಾನದ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ವಿಗ್ರಹವನ್ನು ತುಂಡಾಗಿ ಒಡೆದು ಹಾಕಿರುವುದನ್ನು ಪತ್ತೆ ಮಾಡಿದ್ದಾರೆ. ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಬರ್ಮನ್ ಹೇಳಿದಂತೆ, ಯಾರೋ ದುಷ್ಕರ್ಮಿಗಳು ತಡರಾತ್ರಿ ದೇವಸ್ಥಾನಕ್ಕೆ ನುಗ್ಗಿ ವಿಗ್ರಹವನ್ನು ಧ್ವಂಸ ಮಾಡಿದ್ದಾರೆ.  ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದರು. ದೇವಾಲಯದಿಂದ ಅರ್ಧ ಕಿಲೋಮೀಟರ್ ದೂರದ ರಸ್ತೆಯಲ್ಲಿ ವಿಗ್ರಹದ ತಲೆ ಎಸೆದಿರುವುದು ಕಂಡುಬಂದಿದೆ.

ಬಾಂಗ್ಲಾದಲ್ಲಿನ ಹಿಂದೂ ದೇವಾಲಯಗಳಲ್ಲಿ ಧ್ವಂಸ ಘಟನೆ ಇದೇ ಮೊದಲಲ್ಲ. ಈ ವರ್ಷ ಮಾರ್ಚ್ 17 ರಂದು, ಢಾಕಾದ ಇಸ್ಕಾನ್ ರಾಧಾಕಾಂತ ಜೀವ್ ದೇವಾಲಯವನ್ನು ಧ್ವಂಸಗೊಳಿಸಿ ವಿಗ್ರಹಗಳನ್ನು ತೆಗೆದುಕೊಂಡು ಹೋಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!