ಸಿನಿಮಾ ವಿಮರ್ಶೆ ಮಾಡಿ ಫೇಮಸ್ ಆಗಿದ್ದ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಹೆಸರುವಾಸಿಯಾಗಿದ್ದ ಅಭ್ರದೀಪ್ ಸಾಹಾ ಕೊನೆಯುಸಿರೆಳೆದಿದ್ದಾರೆ.

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಎಂದೇ ಫೇಮಸ್ 27 ವರ್ಷದ  ಅಭ್ರದೀಪ್ ಸಾಹಾ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಚಿತ್ರವಿಚಿತ್ರವಾಗಿ ಸಿನಿಮಾ ವಿಮರ್ಶೆ ಮಾಡಿ ಅವರು ಫೇಮಸ್ ಆಗಿದ್ದರು. ಸಾಕಷ್ಟು ಜೋಶ್​ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಿದ್ದರು. ಇದರ ಜೊತೆಗೆ ಇತರ ವಿಡಿಯೋಗಳನ್ನು ಕೂಡ ಮಾಡುತ್ತಿದ್ದರು. ಅವರಿಗೆ 4.8 ಲಕ್ಷ ಹಿಂಬಾಲಕರು ಇದ್ದರು. ಅವರ ನಿಧನವಾರ್ತೆ ಅನೇಕರಿಗೆ ಶಾಕಿಂಗ್ ಎನಿಸಿದೆ.

ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು. ಹೀಗಾಗಿ ಕಳೆದ ತಿಂಗಳು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ದಿನಗಳ ಹಿಂದೆ ಅವರ ತಂದೆ ಆ್ಯಂಗ್ರಿ ರ‍್ಯಾಂಟ್​ಮ್ಯಾನ್ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ್ದರು. ಮಗನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ ಎಂದು ಅಭ್ರದೀಪ್‌ ತಂದೆ ಹೇಳಿದ್ದರು. ಇದೀಗ ಅಭ್ರದೀಪ್‌ ನಿಧನದ ಸುದ್ದಿ ಫ್ಯಾನ್ಸ್‌ಗೆ ನೋವುಂಟು ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!