ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷ ಭಾರತವು ವಾಡಿಕೆಗಿಂತ ಕಡಿಮೆ ಮಳೆ ಪಡೆಯುವ ಸಾಧ್ಯತೆಗಳಿವೆ. ಏಶ್ಯಾದಲ್ಲಿ ಎಲ್‌ನಿನೋ ಪ್ರಭಾವ ಕಂಡುಬರುತ್ತಿರುವುದೇ ಇದಕ್ಕೆ ಕಾರಣ ಎಂದು ಖಾಸಗಿ ಹವಾಮಾನ ಸಂಸ್ಥೆಯಾದ ಸ್ಕೈಮೆಟ್ ಹೇಳಿದೆ.
ವಾಡಿಕೆಗಿಂತ ಕಡಿಮೆ, ಅಂದರೆ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ನಾಲ್ಕು ತಿಂಗಳ ಅವಧಿಯಲ್ಲಿ 868.6 ಮೀ.ಮೀ. ಮಳೆ ಸುರಿಯಬಹುದೆಂದು ಸಂಸ್ಥೆಯು ತಿಳಿಸಿದೆ.
ಸುದೀರ್ಘ ಅವಧಿಯ ಸರಾಸರಿಗಿಂತ ಶೇ.94ರಷ್ಟು ಮಾತ್ರ ಈ ಬಾರಿ ಮಳೆ ಬೀಳಬಹುದು ಎಂದು ಅದು ಹೇಳಿದೆ.
ಎಲ್‌ನಿನೋ ಮಾತ್ರವಲ್ಲದೆ ಇನ್ನೂ ಕೆಲವು ಅಂಶಗಳು ಈ ಬಾರಿ ಕೊರತೆ ಮಳೆಯ ಮುನ್ಸೂಚನೆ ನೀಡುತ್ತಿವೆ ಎಂದು ಸ್ಕೈಮೆಟ್ ತಿಳಿಸಿದೆ.