ಗುಮ್ಮಟ ನಗರಿಗೆ ಬೆನ್ನು ಬಿದ್ದ ಭೂಕಂಪದ ಬೇತಾಳ, ಮತ್ತೆ 3.9 ತೀವ್ರತೆಯ ಭೂಕಂಪನ

ಹೊಸದಿಗಂತ ವರದಿ ವಿಜಯಪುರ:
ಗುಮ್ಮಟನಗರಿಯಲ್ಲಿ ಭೂಕಂಪ ಬೆನ್ನು ಬಿದ್ದ ಬೇತಾಳದಂತೆ ಕಾಡುತ್ತಿದ್ದು, ಗುರುವಾರ ಮಧ್ಯರಾತ್ರಿ 2.27 ಗಂಟೆಗೆ ಮತ್ತೆ 3.9 ತೀವ್ರತೆಯಷ್ಟು ಲಘು ಭೂಕಂಪನವಾಗಿದ್ದು, ಜನರು ಭೀತಿಗೊಳ್ಳುವಂತಾಗಿದೆ.
ನಗರ ಸೇರಿದಂತೆ ಜಿಲ್ಲೆಯಲ್ಲಿ ಕಳೆದ ವಾರದಿಂದ ಪದೇ ಪದೆ ಲಘು ಭೂಕಂಪನ ಸಂಭವಿಸುತ್ತಿದ್ದು, ಸಾರ್ವಜನಿಕರಲ್ಲಿ ಇನ್ನಿಲ್ಲದ ಆತಂಕ ಮನೆಮಾಡಿದೆ.
ಗುರುವಾರ ಮಧ್ಯರಾತ್ರ 2.21 ಕ್ಕೆ ಸಂಭವಿಸಿರುವ 3.9 ತೀವ್ರತೆಯ ಲಘು ಭೂಕಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಕೌಲಗಿ ಆಗಿದ್ದು, ಪಕ್ಕದ ಉಕ್ಕಲಿ ಗ್ರಾಮ ಸೇರಿದಂತೆ ಸುತ್ತಲಿನ ಗ್ತಾಮದಲ್ಲೂ ಭೂಕಂಪನದ ಅನುಭವಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.
ಅಲ್ಲದೆ ಶುಕ್ರವಾರ ಬೆಳಗ್ಗೆ 7 ಗಂಟೆಗೆ ಮತ್ತೆ ಲಘು ಭೂಕಂಪನದ ಅನುಭವಾಗಿರುವುದಕ್ಕೆ ಜಿಲ್ಲೆಯ ಮಂದಿ ಆತಂಕಗೊಳ್ಳುವಂತಾಗಿದೆ.ಇಂದು ತಜ್ಞರ ಭೇಟಿ:
ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನ ಹಿನ್ನೆಲೆ ಆ.26 ರಂದು ತಜ್ಞರು ವಿಜಯಪುರಕ್ಕೆ ಭೇಟಿ ನೀಡಲಿದ್ದು, ಪದೇ ಪದೆ ಸಂಭವಿಸುತ್ತಿರುವ ಲಘು ಭೂಕಂಪನ ಕುರಿತು ಪರಿಶೀಲಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!