ಹೊಸದಿಗಂತ ಡಿಜಿಟಲ್ ಡೆಸ್ಕ್
ಶ್ರೀಲಂಕಾದಲ್ಲಿ ದಿನೇ ದಿನೇ ಆರ್ಥಿಕ ಬಿಕ್ಕಟ್ಟಿ ಎದುರಾಗುತ್ತಿದ್ದು, ಸಂಪೂರ್ಣವಾಗಿ ಲಂಕಾ ಕಂಗೆಟ್ಟು ಹೋಗಿದೆ.
ಇದೀಗ ಶ್ರೀಲಂಕಾದಲ್ಲಿ ಇಂಧನ ಕೊರತೆ ಉಂಟಾಗಿದ್ದು, ರಾಷ್ಟ್ರವ್ಯಾಪಿ 10 ಗಂಟೆಗಳ ಕಾಲ ದೈನಂದಿನ ವಿದ್ಯುತ ಕಡಿತ ಮಾಡಿದೆ.
ಈಗಾಗ್ಲೇ ಒಂದಲ್ಲ ಒಂದು ಸಂಕಷ್ಟ ಎದುರಿಸುತ್ತಿರುವ ಶ್ರೀಲಂಕಾ, ತೀವ್ರ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ಎದುರಿಸುತ್ತಿದೆ. ಹೀಗಾಗಿ ಶ್ರೀಲಂಕಾದ ಲೋಕೋಪಯೋಗಿ ಆಯೋಗ ಇಂದಿನಿಂದ ಪ್ರತಿದಿನ 10 ಗಂಟೆಗಳ ಕಾಲ ವಿದ್ಯುತ್ ಕಡಿತಗೊಳಿಸುವುದಾಗಿ ಪ್ರಕಟಣೆ ಹೊರಡಿಸಿದೆ.
ಜಲವಿದ್ಯುತ್ ಹಾಗೂ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆಯಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಉಷ್ಣ ವಿದ್ಯುತ್ ಉತ್ಪಾದನೆ ಮಾಡಲು 750 ಮೆಗಾವ್ಯಾಟ್ ವಿದ್ಯುತ್ ಕೊರತೆ ಉಂಟಾಗಿದೆ ಎಂದು ಲೋಕೋಪಯೋಗಿ ಆಯೋಗದ ಅಧ್ಯಕ್ಷ ಜನಕ ರತ್ನಾಯಕ್ ತಿಳಿಸಿದ್ದಾರೆ.
ಈಗಾಗಲೇ ಭಾರತ ಶ್ರೀಲಂಕಾಗೆ ಸಾಧ್ಯವಾದಷ್ಟು ಆರ್ಥಿಕ ಸಹಾಯ ಮಾಡಿದ್ದು, ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗಳಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಘೋಷಣೆ ಮಾಡಿದೆ.