ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚೀತಾ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಮೃತಪಟ್ಟಿದೆ. ಆಫ್ರಿಕಾದಿಂದ ತಂದಿದ್ದ ಹೆಣ್ಣು ಚಿರತೆ ಧಾತ್ರಿ ಇಂದು ಶವವಾಗಿ ಪತ್ತೆಯಾಗಿದೆ. ಚೀತಾ ಮರಣೋತ್ತರ ಪರೀಕ್ಷೆ ನಂತರವೇ ಸಾವಿಗೆ ನಿಖರ ಕಾರಣ ತಿಳಿಸಲಾಗುವುದು.

ಇದೀಗ ಕುನೋ ಉದ್ಯಾನದಲ್ಲಿ ಒಟ್ಟಾರೆ 14 ಚೀತಾಗಳು ಬದುಕುಳಿದಿವೆ, ಬದುಕಿರುವ ಚೀತಾಗಳ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಕುನೋ ವನ್ಯಜೀವಿ ವೈದ್ಯರ ತಂಡ ಹಾಗೂ ನಮೀಬಿಯಾದ ತಜ್ಞರ ತಂಡ ನಿರಂತರವಾಗಿ ಚೀತಾಗಳ ಆರೋಗ್ಯದ ಬಗ್ಗೆ ಗಮನ ಇಟ್ಟಿದ್ದಾರೆ.

ಕಳೆದ ಎರಡು ದಿನದಿಂದ ಧಾತ್ರಿ ಕಾಣಿಸಿರಲಿಲ್ಲ, ಚೀತಾ ಹುಡುಕಾಟ ಜಾರಿಯಲ್ಲಿತ್ತು. ಇಂದು ಮೃತಪಟ್ಟ ಸ್ಥಿತಿಯಲ್ಲಿ ಚೀತಾ ಕಾಣಿಸಿದೆ. ಈವರೆಗೂ ಎಂಟು ಚೀತಾಗಳು ಮೃತಪಟ್ಟಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!