ಪಿಎಫ್ಐ ನಿಷೇಧಿತ ಉಗ್ರ ಸಂಘಟನೆ ಸಿಮಿಯ ಮತ್ತೊಂದು ರೂಪ: ಯತ್ನಾಳ ಆರೋಪ

ಹೊಸದಿಗಂತ ವರದಿ ವಿಜಯಪುರ:
ಪಿಎಫ್ಐ ಸಂಘಟನೆಯು ನಿಷೇಧಿತ ಉಗ್ರ ಸಂಘಟನೆ ಸಿಮಿಯ ಮತ್ತೊಂದು ರೂಪವಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಫ್ಐ, ಎಸ್’ಡಿಪಿಐ ಬ್ಯಾನ್ ಮಾಡಬೇಕು. ಈ ಎರಡೂ ಸಂಘಟನೆಗಳು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿವೆ ಎಂದು ದೂರಿದರು.
ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯರ ವಿರುದ್ಧ ಬಾಂಬ್ ದಾಳಿ ನಡೆಸುವ ಪ್ರಯತ್ನ ಮಾಡಿದರು. ಅವರಗಳ ಮೇಲಿರುವ ಅನೇಕಾ ಗಂಭೀರ ಆರೋಪಗಳ ಬಗ್ಗೆ ದೇಶದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿದ್ದವು. ಕೇಂದ್ರ ಸರ್ಕಾರ ಅತ್ಯಂತ ದೃಢ ನಿಲುವು ತೆಗೆದುಕೊಂಡು, 200 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದಾಗ ವಿದೇಶಿ ಹಣದ ದಾಖಲೆ ಸಿಕ್ಕಿವೆ. ಎರಡು ಸಂಘಟನೆಗಳನ್ನು ಬ್ಯಾನ್ ಮಾಡಬೇಕು ಅನ್ನೋದು ದೇಶಭಕ್ತರ ಆಗ್ರಹವಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!