Sunday, August 14, 2022

Latest Posts

ದಂಗೆ ಬೆನ್ನಲ್ಲೇ ಗೋಟಬಾಯಾಗೆ ಮತ್ತೊಂದು ಶಾಕ್: ನೋ ಎಂಟ್ರಿ ಎಂದ ಅಮೆರಿಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ದಂಗೆಯ ಬೆನ್ನಿಗೇ ಅಮೆರಿಕಗೆ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆ ಅವರ‌ ಅಮೆರಿಕ ಪಲಾಯನ ಕನಸು ನುಚ್ಚುನೂರಾಗಿದೆ.

ಅಮೆರಿಕ ಪ್ರವೇಶಕ್ಕೆ ಯುಎಸ್ ರಾಯಭಾರ ಕಚೇರಿ ವೀಸಾವನ್ನು ನಿರಾಕರಿಸಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆಗೆ ಯಾವುದೇ ವೀಸಾ ನೀಡಲಾಗುವುದಿಲ್ಲ ಎಂದು ಅವರಿಗೆ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಕೊಲಂಬೊದಲ್ಲಿರುವ ಯುಎಸ್ ರಾಯಭಾರ ಕಚೇರಿಯ ಪ್ರತಿನಿಧಿ ಸ್ಪಷ್ಟಪಡಿಸಿದ್ದಾರೆ.

ಗೋಟಬಾಯಾ ರಾಜಪಕ್ಸೆ ರಾಷ್ಟ್ರದ ಮುಖ್ಯಸ್ಥರಾಗಿ ವೀಸಾ ಇಲ್ಲದೆ ಅಲ್ಲಿಗೆ ಹೋಗಬಹುದಾಗಿದ್ದರೂ, ಪ್ರಸ್ತುತ ಸಂದರ್ಭ ವ್ಯತಿರಿಕ್ತವಾಗಿದೆ ಎಂದಿರುವ ರಾಯಭಾರ ಕಚೇರಿ, ಕ್ಯಾಲಿಫೋರ್ನಿಯಾಗೆ ಪ್ರಯಾಣಿಸಲು ರಾಜಪಕ್ಸೆ ಸಂದರ್ಶಕ ವೀಸಾವನ್ನು ಕೋರಿದ್ದರು. ಮನವಿಯನ್ನು ತಿರಸ್ಕರಿಸಲಾಯಿತು ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss