ಪಿಣರಾಯಿ ಸರ್ಕಾರಕ್ಕೆ ಮತ್ತೊಂದು ಆಘಾತ: ಸಹಾಯಕ ಪ್ರಾಧ್ಯಾಪಕ ಸ್ಥಾನಕ್ಕೆ ಪ್ರಿಯಾ ವರ್ಗೀಸ್‌ ಅನರ್ಹವೆಂದ ಕೇರಳ ಹೈಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಕಾರಣವಾಗಿದ್ದ  ಕೇರಳ ರಾಜ್ಯಪಾಲರು ಮತ್ತು ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರ್ಕಾರಕ್ಕೆ ಈಗ ಮತ್ತೊಂದು ಆಘಾತ ಎದುರಾಗಿದೆ. ವಿವಾದಿತ ಕಣ್ಣೂರಿನ ವಿಶ್ವ ವಿದ್ಯಾಲಯಕ್ಕೆ ಸಹಾಯಕ ಪ್ರಾಧ್ಯಾಪಕರ ನೇಮಕದ ಕುರಿತು ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು ಸಹಾಯಕ ಪ್ರಾಧ್ಯಾಪಕ ಸ್ಥಾನಕ್ಕೆ ನೇಮಕಗೊಳ್ಳಲು ಪ್ರಿಯಾ ವರ್ಗೀಸ್‌ ಅನರ್ಹವೆಂದು ಹೈಕೋರ್ಟ್‌ ತೀರ್ಪು ನೀಡಿದೆ.

ಕೇರಳದ ಕಣ್ಣೂರಿನ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಸ್ಥಾನಕ್ಕೆ ಪ್ರಿಯಾ ವರ್ಗೀಸ್‌ ಎಂಬುವವರನ್ನು ನೇಮಕ ಮಾಡಿ ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಸಿಎಂ ಪಿಣರಾಯಿ ವಿಜಯನ್‌ ಆಪ್ತ ಕಾರ್ಯದರ್ಶಿಯ ಪತ್ನಿಯಾಗಿರುವ ಪ್ರಿಯಾವರ್ಗೀಸ್‌ ನೇಮಕವು ಸ್ವಜಪಕ್ಷಪಾತದಿಂದ ಕೂಡಿದೆ ಎಂದು ರಾಜ್ಯಪಾಲ ಆರೀಫ್‌ ಮೊಹಮದ್‌ ಖಾನ್‌ ಈ ಆದೇಶವನ್ನು ತಡೆ ಹಿಡಿದ್ದರು. ಇದು ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ತಿಕ್ಕಾಟಕ್ಕೆ ಕಾರಣವಾಗಿತ್ತು.

ರಾಜ್ಯಪಾಲರ ಆದೇಶ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದ ಕೇರಳ ಸರ್ಕಾರಕ್ಕೆ ಈಗ ಮುಖಭಂಗವುಂಟಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಖಾಸಗಿ ಕಾರ್ಯದರ್ಶಿ ಕೆ ಕೆ ರಾಗೇಶ್ ಅವರ ಪತ್ನಿ ಪ್ರಿಯಾ ವರ್ಗೀಸ್ ಅವರು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಮಲಯಾಳಂ ಸಹ ಪ್ರಾಧ್ಯಾಪಕರಾಗಿ ನೇಮಕಗೊಳ್ಳಲು ಅರ್ಹರಲ್ಲ ಎಂದು ಕೇರಳ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.

ಈ ಹಿಂದೆ ವಿಶ್ವ ವಿದ್ಯಾಲಯಗಳವಿಸಿಗಳ ನೇಮಕದಲ್ಲೂ ಕೇರಳ ಸರ್ಕಾರಕ್ಕ ಹಿನ್ನಡೆಯುಂಟಾಗಿತ್ತು. ಕೇರಳ ಸರ್ಕಾರ ನೇಮಿಸಿದ ವಿಸಿಗಳಲ್ಲಿ ಒಬ್ಬರನ್ನು ಹೈಕೋರ್ಟ್‌ ವಜಾ ಗೊಳಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!