ಫಿಫಾ ವಿಶ್ವಕಪ್ 2022: ಟಿಕೆಟ್ ದರ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ

ಹೊದಿಗಂತ ಡಿಜಿಟಲ್ ಡೆಸ್ಕ್:

ಬಹುನಿರೀಕ್ಷಿತ ಫಿಫಾ ವಿಶ್ವಕಪ್ 2022 ಫುಟ್‌ಬಾಲ್ ಪಂದ್ಯಾವಳಿಗೆ ಇನ್ನೇನು ಒಂದು ದಿನ ಅಷ್ಟೇ ಬಾಕಿ ಇದೆ.
ಈ ಬಾರಿ ಪಂದ್ಯಾವಳಿಯ ಟಿಕೆಟ್ ದರ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರೆಂಟಿ.

ಫುಟ್‌ಬಾಲ್ ಇತಿಹಾಸದಲ್ಲೇ ಮೊದಲ ಬರಿಗೆ ಕತಾರ್ ಪಂದ್ಯಾವಳಿ ಆಯೋಜಿಸುತ್ತಿದೆ. ನಾಲ್ಕು ವರ್ಷದ ಹಿಂದೆ ರಷ್ಯಾದಲ್ಲಿ ನಡೆದ ವಿಶ್ವಕಪ್ ಫುಟ್‌ಬಾಲ್ ವೇಳೆಯಿದ್ದ ಟಿಕೆಟ್ ದರಕ್ಕಿಂತ ಈ ಬಾರಿ ಶೇ.40ರಷ್ಟು ಏರಿಕೆಯಾಗಿದೆ.

ಅಂದು ಟಿಕೆಟ್ ದರ ಸರಾಸರಿ 214(20 ಸಾವಿರ ರೂ)  ಪೌಂಡ್‌ಗಳಾಗಿದ್ದರೆ ಇಂದು ಕತಾರ್‌ನಲ್ಲಿ ನಡೆಯುವ ಪಂದ್ಯದ ದರ 286 (28 ಸಾವಿರ ರೂ) ಪೌಂಡ್‌ಗಳಿಗೆ ಏರಿಕೆಯಾಗಿದೆ. 2018ರ ಫೈನಲ್ ಪಂದ್ಯದ ಟಿಕೆಟ್ ದರದೊಂದಿಗೆ ಹೋಲಿಸಿದರೆ ಈ ಬಾರಿ ದರ ಶೇ.59ರಷ್ಟು ಹೆಚ್ಚಾಗಿದೆ. ಈ ಬಾರಿ ಫೈನಲ್ ಪಂದ್ಯದ ಟಿಕೆಟ್ ದರ 686 (66,689 ರೂ.) ಪೌಂಡ್ ಆಗಿದ್ದು ಇದು ಕಳೆದ 20 ವರ್ಷಗಳ ವಿಶ್ವಕಪ್ ಫುಟ್‌ಬಾಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಎಂದು ಸಮೀಕ್ಷೆಯೊಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!