Tuesday, February 7, 2023

Latest Posts

ರೆಫ್ರಿಜರೇಟರ್‌ನಲ್ಲಿ ಮತ್ತೊಂದು ಹೆಣ: ಶ್ರದ್ಧಾ ಮಾದರಿಯಲ್ಲಿ ಮತ್ತೊಂದು ಕೊಲೆ ಕೃತ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರದ್ಧಾ ವಾಕರ್ ಭೀಕರ ಹತ್ಯೆಯ ಸುದ್ದಿ ಇನ್ನೂ ಚರ್ಚೆಯಲ್ಲಿರುವ ನಡುವೆಯೇ ವ್ಯಕ್ತಿಯೋರ್ವರನ್ನು ಕೊಂದು ದೇಹವನ್ನು ರೆ-ಜರೇಟರ್‌ನಲ್ಲಿಟ್ಟ ಮತ್ತೊಂದು ಘಟನೆ ದಿಲ್ಲಿಯಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.  ಪಾಂಡವನಗರ ನಿವಾಸಿ ಅಂಜನ್ ದಾಸ್ ಎಂಬವರು ಕೊಲೆಯಾದವರಾಗಿದ್ದು, ಇವರನ್ನು ಪೂನಂ ಮತ್ತು ಆಕೆಯ ಮಗ ದೀಪಕ್ ಹತ್ಯೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಹತ್ಯೆಗೈದ ಬಳಿಕ ದೇಹದ ಭಾಗಗಳನ್ನು ಕತ್ತರಿಸಿ, ರೆಫ್ರಿಜರೇಟರ್‌ನಲ್ಲಿ ಶೇಖರಿಸಿಟ್ಟಿದ್ದು, ನಂತರ ಪೂರ್ವ ದೆಹಲಿ ನೆರೆಹೊರೆಗಳಲ್ಲಿ ವಿಲೇವಾರಿ ಮಾಡಿರುವ ಆರೋಪ ಕೂಡಾ ಇವರ ಮೇಲಿದೆ.
ದಾಸ್‌ಗೆ  ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿತ್ತು. ನಂತರ ದೇಹವನ್ನು ಕತ್ತರಿಸಿ, ರೆಫ್ರಿಜರೇಟರ್‌ನಲ್ಲಿ ತುಂಡುಗಳನ್ನು ಸಂಗ್ರಹಿಸಿ ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಸೆದಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕೆ ಪೂರಕವಾಗಿ  ಸಿಸಿಟಿವಿ ಕ್ಯಾಮೆರಾಗಳಿಂದ ಆಘಾತಕಾರಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿದ್ದು, ದೃಶ್ಯಾವಳಿಗಳಲ್ಲಿ ದೀಪಕ್ ತಡರಾತ್ರಿಯಲ್ಲಿ ಕೈಯಲ್ಲಿ ಚೀಲವನ್ನು ಹಿಡಿದುಕೊಂಡು ಹೋಗುತ್ತಿದ್ದು, ಇದೇ ವೇಳೆ ದೀಪಕ್‌ನನ್ನು ತಾಯಿ ಪೂನಂ ಅವರನ್ನು ಹಿಂಬಾಲಿಸುತ್ತಿರುವುದು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!