‘ಸೃಷ್ಟಿಕರ್ತ’ನಿಗೇ ಉಲ್ಟಾ ಹೊಡೆದ ಕೋವಿಡ್: ಚೀನಾದಲ್ಲಿ ಸರ್ಕಾರದ ವಿರುದ್ಧ ದಂಗೆಯೆದ್ದ ನಾಗರಿಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ವೈರಸ್ ಅಬ್ಬರ, ಇನ್ನೊಂದೆಡೆ ಜನರೆಯ ಆಕ್ರೋಶ….
ಕೋವಿಡ್ ಉಗಮಸ್ಥಾನ ಚೀನಾ ಈಗ ಅಕ್ಷರಶಃ ತತ್ತರಿಸಿಹೋಗಿದೆ.
ಜನತೆ ಸರ್ಕಾರದ ಲಾಕ್‌ಡೌನ್ ಕ್ರಮದ ವಿರುದ್ಧ ಅಕ್ಷರಶಃ ದಂಗೆಯೇಳುತ್ತಿದ್ದಾರೆ. ಪ್ರತಿಭಟನೆಗಳು ದಿನದಿಂದ ದಿನಕ್ಕೆ ತೀವ್ರತೆ ಒಡೆದುಕೊಳ್ಳುತ್ತಿದೆ.
ನ.೨೪ರಂದು ಕ್ಸಿಂಜಿಯಾಂಗ್ ಪ್ರಾಂತದ ರಾಜಧಾನಿ ಉರುಂಪಿ ಎಂಬಲ್ಲಿ ನಡೆದ ಅಗ್ನಿ ಅನಾಹುತ ಜನತೆಯ ಆಕ್ರೋಶದ ಕಿಚ್ಚಿಗೆ ಇನ್ನಷ್ಟು ತುಪ್ಪ ಸುರಿದಿದೆ. ಅಲ್ಲಿ ಅಪಾರ್ಟ್‌ಮೆಂಟ್‌ವೊಂದಕ್ಕೆ ಬೆಂಕಿ ಬಿದ್ದಿತ್ತು. ಕೋವಿಡ್ ಗೈಡ್‌ಲೈನ್ ಜಾರಿಯಲ್ಲಿದ್ದ ಕಾರಣ ಅಗ್ನಿಶಾಮಕ ದಳ ಸ್ಥಳಕ್ಕೆ ಬರುವುದೂ ತಡವಾಗಿತ್ತು. ಅಪಾರ್ಟ್‌ಮೆಂಟ್‌ನೊಳಗೆ ಸಿಲುಕಿದವರಿಗೆ ಹೊರಬರಲೂ ಗೈಡ್‌ಲೈನ್ ಅಡ್ಡಿಯಾಗಿತ್ತು. ಕಣ್ಣೆದುರೇ ಜನ ಬೆಂಕಿಗಾಹುತಿಯಾಗುವುದು ಕಂಡು ಜನತೆಯ ಆಕ್ರೋಶ ಅಂದು ಇನ್ನಷ್ಟು ಹೆಚ್ಚಿತ್ತು.  ಇದಾದ ಬೆನ್ನಿಗೇ ಕ್ಸಿಂಜಿಯಾಂಗ್ ಪ್ರಾಂತದ ರಾಜಧಾನಿ ಉರುಂಪಿಯಲ್ಲಿಯೂ ಪ್ರತಿಭಟನೆ ಜೋರಾಗಿಯೇ ನಡೆಯುತ್ತಿದೆ. ಹೋರಾಟಗಾರರ ವಿರುದ್ಧ ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಸಿಕ್ಕ ಸಿಕ್ಕವರನ್ನು ಹೊಡೆದು, ಎಳೆದೊಯ್ಯುವುದೂ ಜನತೆಯ ಆಕ್ರೋಶ ಇನ್ನಷ್ಟು ಹೆಚ್ಚಲು ಕಾರಣವಾಗಿದೆ. ಪದೇಪದೆ ಲಾಕ್‌ಡೌನ್ ಹೇರುತ್ತಿರುವುದರಿಂದಾಗಿ ಬೇಸತ್ತಿರುವ ಜನ, ಚೀನ ಅಧ್ಯಕ್ಷ ಜಿನ್‌ಪಿಂಗ್ ರಾಜೀನಾಮೆಗಾಗಿ ಆಗ್ರಹಿಸುತ್ತಿದ್ದಾರೆ. ಕಮ್ಯೂನಿಸ್ಟ್ ಸರಕಾರ ಬೇಡ, ಅನ್‌ಲಾಕ್ ಚೀನ, ಕೊರೊನಾ ಟೆಸ್ಟ್ ಬೇಡ, ಸ್ವಾತಂತ್ರ್ಯ ಬೇಕು, ಮಾಧ್ಯಮ ಸ್ವಾತಂತ್ರ್ಯ ಬೇಕು ಎಂಬ ಎಂಬ ಘೋಷಣೆ ಎಲ್ಲೆಡೆ ಕೇಳಿಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!