ವಯಸ್ಸಾಗುವುದನ್ನು ಕಡಿಮೆ ಮಾಡುವ ಆರು ಆಹಾರ ಪದಾರ್ಥಗಳು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಯಸ್ಸು ಹೆಚ್ಚುತ್ತಾ..ಚರ್ಮದ ಬದಲಾವಣೆಗಳು ಸಹಜ. ಒಂದು ವಯಸ್ಸಿನವರೆಗೂ ಚೆನ್ನಾಗಿ ಕಾಣುವ ತ್ವಚೆ 30ರ ನಂತರ ನಮ್ಮ ಮಾತು ಕೇಳುವುದಿಲ್ಲ. ವಯಸ್ಸಾದಂತೆ ಸುಕ್ಕು, ಮೊದಲಾದ ಸಮಸ್ಯೆಗಳು ಕಾಣುತ್ತವೆ. ಇವುಗಳನ್ನು ಹೋಗಲಾಡಿಸಲು ಆಂಟಿ ಏಜಿಂಗ್ ಡಯಟ್ ಅನ್ನು ಬಳಸಬಹುದು. ಹೆಚ್ಚಿನ ಪೋಷಕಾಂಶಗಳು, ಉತ್ಕರ್ಷಣ ನಿರೋಧಕಗಳು ಮತ್ತು ಪ್ರೋಟೀನ್‌ಗಳನ್ನು ಹೊಂದಿರುವ ಆಹಾರವು ಹೆಚ್ಚು ಉತ್ತಮವಾಗಿದೆ.

ತ್ವಚೆ ಆರೋಗ್ಯವಾಗಿರಲು ಈ 6 ಆಂಟಿ ಏಜಿಂಗ್ ಆಹಾರ ಪದಾರ್ಥಗಳನ್ನು ಅನುಸರಿಸಿ

NUTS: ಬೇಳೆಕಾಳುಗಳು, ಸ್ಯಾಚುರೇಟೆಡ್ ಅಥವಾ ಕೊಬ್ಬು, ಫೈಬರ್ ಮತ್ತು ಪ್ರೋಟೀನ್ ಹೊಂದಿರುವ ಕಾಳುಗಳನ್ನು ತಿನ್ನಿರಿ. ಬಾದಾಮಿ, ಗೋಡಂಬಿ, ವಾಲ್‌ನಟ್ಸ್, ಕಡಲೆಕಾಯಿಯನ್ನು ಆಹಾರದಲ್ಲಿ ಸೇರಿಸಿ.

Water: ನೀರು ಕುಡಿಯುವುದರಿಂದ ನಿಮ್ಮ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೆ ನಿಮ್ಮ ವಯಸ್ಸನ್ನು ನಿಧಾನಗೊಳಿಸುತ್ತದೆ. ದೇಹವು ನಿರ್ಜಲೀಕರಣಗೊಂಡಾಗ ಜಿಡ್ಡಿನಲ್ಲಿರುವಂತೆ ಭಾಸವಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ನೀರು ಕುಡಿದರೆ ಸಾಕು.

Broccoli: ಬ್ರೊಕೊಲಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಿಟಮಿನ್, ಆ್ಯಂಟಿ ಆಕ್ಸಿಡೆಂಟ್, ಫೈಬರ್ ಮತ್ತು ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿದ್ದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಅವುಗಳ ಜೊತೆಗೆ, ವಿಟಮಿನ್ ಸಿ ಕಾಲಜನ್ ಅನ್ನು ಉತ್ಪಾದಿಸುತ್ತದೆ ಅದು ಚರ್ಮವನ್ನು ಆರೋಗ್ಯಕರವಾಗಿರುವಂತೆ ಮಾಡುತ್ತದೆ.

Red Wine: ಬಹಳಷ್ಟು ಜನರು ರೆಡ್ ವೈನ್ ಅನ್ನು ಇಷ್ಟಪಡದಿರಬಹುದು. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬಂಧಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಮಹಿಳೆಯರು ಮತ್ತು ಪುರುಷರು ಇಬ್ಬರೂ ಸೇವಿಸಬಹುದು.

Pappaya: ಸುಕ್ಕು ಮುಕ್ತ ತ್ವಚೆಗಾಗಿ ಪಪ್ಪಾಯಿಯನ್ನು ತೆಗೆದುಕೊಳ್ಳಿ. ಇದು ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ. ಇದು ಸತ್ತ ಚರ್ಮದ ಕೋಶಗಳನ್ನು ಸಹ ತೆಗೆದುಹಾಕುತ್ತದೆ.

Others: ಇವುಗಳ ಜೊತೆಗೆ ಇತರ ಹಣ್ಣುಗಳು ದಾಳಿಂಬೆ, ಬ್ಲೂಬೆರ್ರಿ, ಗೆಣಸು, ಆವಕಾಡೊವನ್ನು ದಿನನಿತ್ಯದ ಆಹಾರದಲ್ಲಿ ತೆಗೆದುಕೊಳ್ಳುವುದ ಉತ್ತಮ.

ಡಾರ್ಕ್ ಚಾಕೊಲೇಟ್ ಭರಿತ ಆಹಾರಗಳು ಸ್ವಲ್ಪ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ. ಅವು ಉತ್ಕರ್ಷಣ ನಿರೋಧಕಗಳನ್ನು ಸಹ ಹೊಂದಿರುತ್ತವೆ. ಪಾಲಕ್ ಸೊಪ್ಪಿನಂತಹ ಸೊಪ್ಪುಗಳು ತೂಕ ಇಳಿಸಲು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!