ನಾಯಕಿಯರಿಗೆ ಗೌರವ ಸಿಗುತ್ತಿಲ್ಲ: ನಾಯಕರನ್ನು ಪ್ರೀತಿಸುವ ಪಾತ್ರ ಹೊರತು ಬೇರೇನೂ ಇಲ್ಲ-ತಮನ್ನಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ರರಂಗದಲ್ಲಿ ಹೀರೋ, ಹೀರೋಯಿನ್ ಮತ್ತು ಉಳಿದ ಕಲಾವಿದರ ನಡುವೆ ವ್ಯತ್ಯಾಸವಿದೆ. ಅವರವರ ವ್ಯಾಪ್ತಿಗೆ ತಕ್ಕಂತೆ ಸೌಲಭ್ಯ, ರೀತಿ-ನೀತಿಗಳಿವೆ. ಕೆಲವರು ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಾರೆ. ಹೀರೋಗಳಿಗೆ ಸಿಗುವ ಗೌರವ ಹೀರೋಯಿನ್‌ಗಳಿಗೆ ಸಿಗುವುದಿಲ್ಲ ಎಂದು ಅದೆಷ್ಟೋ ಮಂದಿ ಹೇಳಿದ್ದಾರೆ. ಇದೀಗ ಆ ಸಾಲಿಗೆ ಮಿಲ್ಕಿ ಬ್ಯೂಟಿ ತಮನ್ನಾ ಕೂಡ ಸೇರಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ, ಚಿತ್ರರಂಗದಲ್ಲಿ ಕಲಾವಿದರ ನಡುವೆ ಸಾಕಷ್ಟು ಬದಲಾವಣೆ ಇರುತ್ತವೆ. ಈ ಬಗ್ಗೆ ಯಾರೂ ಗಂಭೀರವಾಗಿ ಮಾತನಾಡುವುದಿಲ್ಲ. ನಾನು ಕೆಲಸ ಮಾಡಿದ ಚಿತ್ರಗಳಲ್ಲೂ ಸಹ ಈ ಬಗ್ಗೆ ಮಾತನಾಡಿದ್ರೆ ಅಥವಾ ಸಲಹೆಗಳನ್ನು ನೀಡಿದರೆ, ಅವುಗಳನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಚಿತ್ರರಂಗದಲ್ಲಿ ಮಹಿಳೆಯರಿಗೆ ಸರಿಯಾದ ಶಿಷ್ಟಾಚಾರ ಇಲ್ಲ. ಬರೀ ನಾಯಕರನ್ನು ಪ್ರೀತಿಸುವ ಪಾತ್ರಗಳಿಗೆ ಮಾತ್ರ ನಾಯಕಿಯರನ್ನು ಸೀಮಿತ ಮಾಡ್ತಾರೆ.

ಇನ್ನು ಸಂಭಾವನೆ ಬಗ್ಗೆ ಹೇಳಬೇಕಾಗೇ ಇಲ್ಲ. ಹೀರೋಗಳಿಗೆ ಕೊಡುವದರಲ್ಲಿ ಅರ್ಧವೂ ಇರುವುದಿಲ್ಲ, ಐಡೆಂಟಿಟಿ ಅಸಲೇ ಇಲ್ಲ. ಚಿತ್ರದ ಪ್ರಚಾರದಲ್ಲಿ ಹೀರೋಗಳು ಭಾಗವಹಿಸದಿದ್ದರೂ ಯಾರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನಾಯಕಿಯರು ಭಾಗವಹಿಸದಿದ್ದರೆ, ನಿರ್ದೇಶಕ ಮತ್ತು ನಿರ್ಮಾಪಕರೊಂದಿಗೆ ಸಮಸ್ಯೆಗಳು ಮತ್ತು ಭಿನ್ನಾಭಿಪ್ರಾಯಗಳಿವೆ ಎಂದು ತಕ್ಷಣವೇ ಪ್ರಚಾರ ಮಾಡಲಾಗುತ್ತದೆ. ಈ ಪರಿಸ್ಥಿತಿಗಳು ಬದಲಾಗಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!