ಎಐಎಡಿಎಂಕೆ ಮಾಜಿ ಸಚಿವನಿಗೆ ಸಂಬಂಧಿಸಿದ 26 ಪ್ರದೇಶಗಳಲ್ಲಿ ಭ್ರಷ್ಟಾಚಾರ ನಿಗ್ರಹ ಇಲಾಖೆ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ಇಲಾಖೆ (ಡಿವಿಎಸಿ) ಮಂಗಳವಾರ ಎಐಎಡಿಎಂಕೆ ಮಾಜಿ ಸಚಿವರಾದ ವಿಜಯಭಾಸ್ಕರ್ ಮತ್ತು ಎಸ್ಪಿ ವೇಲುಮಣಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ ನಡೆಸಿದ್ದು ತಮಿಳುನಾಡಿನಾದ್ಯಂತ ವಿಜಯಭಾಸ್ಕರ್ ಮತ್ತು ಎಸ್ಪಿ ವೇಲುಮಣಿ ಅವರಿಗೆ ಸಂಬಂಧಿಸಿದ 26 ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಮೂಲಗಳು ವರದಿ ಮಾಡಿವೆ.

ದೂರಿನ ಆಧಾರದ ಮೇಲೆ, ಮಾಜಿ ಪೌರಾಡಳಿತ ಸಚಿವ ಎಸ್‌ಪಿ ವೇಲುಮಣಿ ವಿರುದ್ಧ ಡಿವಿಎಸಿ ತನಿಖೆ ನಡೆಸುತ್ತಿದೆ, 2015-2018 ರ ನಡುವೆ ಹಳೆಯ ಬೀದಿ ದೀಪಗಳನ್ನು ಎಲ್‌ಇಡಿ ದೀಪಗಳಿಗೆ ಬದಲಾಯಿಸಿದ ಸಂದರ್ಭದಲ್ಲಿ ಎಲ್‌ಇಡಿ ದೀಪಗಳಿಗೆ ಹೆಚ್ಚಿನ ದರ ನಿಗದಿಪಡಿಸಿ ಸರ್ಕಾರದ ಬೊಕ್ಕಸಕ್ಕೆ 500 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಆರೋಗ್ಯ ಸಚಿವ ಸಿ ವಿಜಯಭಾಸ್ಕರ್‌ಗೆ ಸಂಬಂಧಿಸಿದ ಆಸ್ತಿಗಳ ಮೇಲೂ ಡಿವಿಎಸಿ ದಾಳಿ ನಡೆಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗದ ನಿಯಮಗಳಿಗೆ ವಿರುದ್ಧವಾಗಿ ಮಂಜಕರನೈ ಗ್ರಾಮದ ವೆಲ್ಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ 2020 ರಲ್ಲಿ ಅಗತ್ಯ ಪ್ರಮಾಣಪತ್ರಗಳ ವಿತರಣೆಯಲ್ಲಿನ ಅಕ್ರಮಗಳ ಬಗ್ಗೆ ವಿಜಯಭಾಸ್ಕರ್ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಪಾಸಣಾ ಅಧಿಕಾರಿಗಳಿಗೆ ಸುಳ್ಳು ವರದಿ ನೀಡುವಂತೆ ಒತ್ತಾಯಿಸಿದ್ದಾರೆ ಎಂಬ ಆರೋಪವೂ ವಿಜಯಭಾಸ್ಕರ್ ಮೇಲಿದೆ ಎಂದು ಮೂಲಗಳ ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!