ರಸ್ತೆ ಸುರಕ್ಷತೆ ಬಗೆಗಿನ ಹೊಸ ಜಾಹೀರಾತಿನ ಬಗ್ಗೆ ಹೆಚ್ಚಾಗಿದೆ ಚರ್ಚೆ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಅಕ್ಷಯ್ ಕುಮಾರ್ ರಸ್ತೆ ಸುರಕ್ಷತೆ ಜಾಹೀರಾತು ಚರ್ಚೆ ಹುಟ್ಟುಹಾಕಿದೆ.
ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಈ ಸರ್ಕಾರಿ ಜಾಹೀರಾತಿನ ಉದ್ದೇಶವಾಗಿದೆ. ಆದರೆ ಈ ಜಾಹೀರಾತಿನಲ್ಲಿ ವರದಕ್ಷಿಣೆ ಪಿಡುಗಿಗೆ ಪ್ರೋತ್ಸಾಹ ನೀಡಲಾಗಿದೆ ಎನ್ನುವುದು ಕೆಲವರ ವಾದವಾಗಿದೆ.
ಈ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಕೆಲವರು ವರದಕ್ಷಿಣೆ ನೀಡಬೇಕು ಎನ್ನುವುದನ್ನು ತೋರಿಸಿದಂತೆ ಕಾಣುತ್ತಿದೆ ಎಂದರೆ ಹಲವರು ಇದು ರಸ್ತೆ ಸುರಕ್ಷತೆ ಬಗೆಗಿನ ಜಾಹೀರಾತು ಎನ್ನುವುದು ಸುಲಭವಾಗಿ ಅರ್ಥವಾಗುತ್ತದೆ ಎನ್ನುತ್ತಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?
ತಂದೆ ತನ್ನ ಮಗಳನ್ನು ಗಂಡನ ಮನೆಗೆ ಕಳಿಸುತ್ತಾ ಕಣ್ಣೀರು ಹಾಕುತ್ತಿರುತ್ತಾರೆ. ಈ ವೇಳೆ ಪೊಲೀಸ್ ಪಾತ್ರದಲ್ಲಿ ಬರುವ ಅಕ್ಷಯ್ ಕುಮಾರ್, ಈ ರೀತಿ ಕಾರ್‌ನಲ್ಲಿ ಕಳಿಸಿದರೆ ಕಣ್ಣೀರು ಬರದೇ ಇನ್ನೇನು ಎಂದು ಹೇಳುತ್ತಾರೆ. ಅದಕ್ಕೆ ತಂದೆ ಈ ಕಾರ್‌ನಲ್ಲಿ ಎಲ್ಲಾ ಇದೆ, ಎಸಿ ಇದೆ, ಮ್ಯೂಸಿಕ್ ಸಿಸ್ಟಮ್ ಇದೆ ಎನ್ನುತ್ತಾರೆ. ಅದಕ್ಕೆ ಅಕ್ಷಯ್ ಹೇಳುತ್ತಾರೆ. ಇದರಲ್ಲಿ ಇರುವುದು ಎರಡು ಏರ್ ಬ್ಯಾಗ್ ಮಾತ್ರ. ಆಕ್ಸಿಡೆಂಟ್ ಆದರೆ ಡ್ರೈವರ್ ಹಾಗೂ ಪಕ್ಕದವರು ಬಚಾವ್ ಆಗುತ್ತಾರೆ. ಮಗ ಸೊಸೆ ಸುರಕ್ಷಿತವಾಗಿಲ್ಲ ಎನ್ನುತ್ತಾರೆ. ತಕ್ಷಣ ಆರು ಏರ್ ಬ್ಯಾಗ್ ಇರುವ ಕಾರ್ ಬರುತ್ತದೆ. ಇದರಲ್ಲಿ ಕುಳಿತು ಅಪಘಾತ ಸಂಭವಿಸಿದರೆ ಎಲ್ಲಾ ಏರ್ ಬ್ಯಾಗ್‌ಗಳು ಓಪನ್ ಆಗುತ್ತವೆ. ಆದ್ದರಿಂದ ಎಲ್ಲರೂ ಸುರಕ್ಷಿತವಾಗಿರಬಹುದು ಎನ್ನುತ್ತಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!