ಇಂಫಾಲ್‌ನ ಬಾಸ್ಕೆಟ್‌ಬಾಲ್ ಮೈದಾನದ ಬಳಿ ಐಇಡಿ ಇರಿಸಿದ್ದ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಫಾಲ್‌ನ ಬಾಸ್ಕೆಟ್‌ಬಾಲ್ ಮೈದಾನದ ಬಳಿ ಸುಧಾರಿತ ಸ್ಫೋಟಕ ಸಾಧನವನ್ನು ಇರಿಸಿದ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ.

ಇಂಫಾಲ್‌ನ ಸಿಂಗ್‌ಜಮೇಯ್ ಚಿಂಗಮಖಾದ ಬಾಸ್ಕೆಟ್‌ಬಾಲ್ ಮೈದಾನದ ಬಳಿ ಐಇಡಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರಮಯುಮ್ ಭೋಗೇಂದ್ರೋ ಸಿಂಗ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಇವನಿಂದ ಐಇಡಿಯಲ್ಲಿ ಬಳಸಲಾದ ಸಾಧನದಂತೆಯೇ ಆರು ಎಲೆಕ್ಟ್ರಾನಿಕ್ ಡಿಜಿಟಲ್ ಸರ್ಕ್ಯೂಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಂಫಾಲ್ ವೆಸ್ಟ್‌ನ ಪೊಲೀಸ್ ಅಧೀಕ್ಷಕ ಐಪಿಎಸ್ ಕ್ಷ ಶಿವಕಾಂತ ಸಿಂಗ್ ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ ವ್ಯಕ್ತಿಯು ತಾನು UNLF (ಬಂಡುಕೋರ ಗುಂಪು) ನ ಸಕ್ರಿಯ ಕೇಡರ್ ಎಂದು ಬಹಿರಂಗವಾಗಿದ್ದು, ಬಂಧಿತ ಆರೋಪಿಯಿಂದ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!