ರಾಷ್ಟ್ರವಿರೋಧಿ ಚಟುವಟಿಕೆ, ಮತಾಂಧತೆ, ಜಿಹಾದ್: 750 ಮದರಸಾಗಳಿಗೆ ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಮಿನಲ್ಲಿರುವ ಕೆಲವು ಮದರಸಾಗಳಲ್ಲಿ ರಾಷ್ಟ್ರವಿರೋಧಿ ಚಟುವಟಿಕೆ, ಮತಾಂಧತೆ, ಜಿಹಾದ್ ತರಬೇತಿ ನೀಡಲಾಗುತ್ತಿರುವ ಹಿನ್ನಲೆಯಲ್ಲಿ 750 ಮದರಸಾಗಳನ್ನು ಮುಚ್ಚಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ ಹೇಳಿದ್ದಾರೆ.

ರಾಜ್ಯದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಮದ್ರಸಾಗಳನ್ನು ಮುಂದುವರಿಸಲಾಗಿದೆ. ಆದರೆ ಇವುಗಳ ಮೇಲೂ ಸರಕಾರ ನಿಗಾ ಇಟ್ಟಿದೆ. ಎಲ್ಲೆಲ್ಲಿ ಮದರಸಾ ಶಿಕ್ಷಕರ ವಿರುದ್ಧ ದೂರುಗಳು ಬಂದಿವೆಯೋ ಅಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಂಡಿದೆ.

ಅಂತಹ ಮದರಸಾಗಳನ್ನು ಮುಚ್ಚಲಾಗಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ ಪಕ್ಕದ ಶಾಲೆಗಳಿಗೆ ಹೋಗುವಂತೆ ಸೂಚಿಸಲಾಗಿದೆ. ನಮ್ಮಲ್ಲಿ ಸರಕಾರಿ ಮದರಸಾಗಳಿಲ್ಲ ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!