ಈ ಸೈಕಲ್‌ ನ ಕದಿಯೋಕಾಗಲ್ಲ.. !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಾಧಿಸಹೊರಟವನಿಗೆ ಸಾವಿರದಾರಿ ಎಂಬ ಮಾತನ್ನು ಅಸ್ಸಾಂನ ವಿದ್ಯಾರ್ಥಿಯೊಬ್ಬ ಸಾಬೀತು ಪಡಿಸಿದ್ದಾನೆ. ʼಕಳ್ಳತನ-ನಿರೋಧಕʼ ಇ-ಬೈಸಿಕಲ್‌ ನಿರ್ಮಿಸುವ ಮೂಲಕ ನಾವು ಯಾರ್ಗೂ ಕಮ್ಮಿ ಇಲ್ಲ ಎಂದಿದ್ದಾನೆ. ಆಧುನಿಕ ಸೆನ್ಸಾರ್‌, ಲೊಕೇಷನ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಎಲ್ಲವೂ ಇದರೊಳಗಿದೆ. ಇನ್ನೂ ವಿಶೇಷವೇನೆಂದರೆ ಇವೆಲ್ಲವೂ ತ್ಯಾಜ್ಯದಿಂದ ತಯಾರಿಸಲ್ಪಟ್ಟಿದ್ದು.

ಯಾರಪ್ಪಾ ಈ ಹುಡುಗ, ಅವನು ಕಂಡು ಹಿಡಿದಿರುವುದಾದರೂ ಏನು? ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿದ್ದರೆ ಉತ್ತರ ಇಲ್ಲಿದೆ ನೋಡಿ.

ಅಸ್ಸಾಂ ರಾಜ್ಯದ ಕರೀಂಗಂಜ್‌ ನ ಅಸ್ಸಾಂ ರೈಫಲ್ಸ್‌ ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಾಮ್ರಾಟ್‌ ನಾಥ್‌ ಎಂಬುವವನೇ ಈ ಸಾಧನೆ ಮಾಡಿದ ಹುಡುಗ. ಚಿಕ್ಕಂದಿನಿಂದಲೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಈತ ಕಳ್ಳತನ-ನಿರೋಧಕ ಸಿಸ್ಟಮ್‌ ಅನ್ನು ಬೈಸಿಕಲ್ಗೆ ಅಳವಡಿಸಿದ್ದಾನೆ. ಆಧುನಿಕ ಸೆನ್ಸಾರ್‌, ಲೊಕೇಷನ್‌ ಟ್ರ್ಯಾಕಿಂಗ್‌ ಸಿಸ್ಟಮ್‌ ಎಲ್ಲವೂ ಅಳವಡಿಕೆಯಾಗಿರುವುದರಿಂದ ಕಳ್ಳತನವಾಗುವ ಪ್ರಶ್ನೆಯೇ ಇಲ್ಲ. ಆತನೇ ಹೇಳುವ ಪ್ರಕಾರ ಅಕಸ್ಮಾತ್‌ ಯಾರಾದರೂ ಕದಿಯಲು ಪ್ರಯತ್ನಿಸಿದರೆ ತಕ್ಷಣವೇ ನಿಮ್ಮ ಮೊಬೈಲ್ಗೆ ಒಂದು ಮೆಸೇಜ್‌ ಬರುತ್ತದೆ. ಹಾಗೂ ಇರೊಳಗಿರುವ ಎಂಟಿ-ಥೆಫ್ಟ್‌ ಅಲರಾಂ ಜೋರಾಗಿ ಹೊಡೆದುಕೊಳ್ಳಲು ಪ್ರಾರಂಭಿಸುತ್ತದೆ. ಕದಿಯಲು ಬಂದವಗೆ ಈ ಸೌಂಡ್‌ ಕೇಳಿ ಸೈಕಲ್‌ ಅಲ್ಲೇ ಬಿಟ್ಟು ಓಡಿ ಹೋಗದೇ ಬೇರೆ ದಾರಿ ಇಲ್ಲ.

ಅಲ್ಲದೇ ಈ ಬೈಸಿಕಲ್ಗೆ Li-ion ಬ್ಯಾಟರಿಗಳನ್ನು ಬಳಸಲಾಗಿದೆ. ಇವೆಲ್ಲ ಬೇಡವೆಂದು ಬಿಟ್ಟ ಲ್ಯಾಪ್‌ ಟಾಪ್‌ ಗಳಿಂದ ಬಂದಿದ್ದು. ಒಂದು ಸಲ ಛಾರ್ಜ್‌ ಮಾಡಿದರೆ 40 ಕಿ.ಮಿ. ವೇಗದಲ್ಲಿ 60 ಕಿ.ಮಿ.ಗಳಷ್ಟು ದೂರವನ್ನು ಇದು ಚಲಿಸಬಲ್ಲುದು.

“ಈ ಬೈಸಿಕಲ್‌ ನಲ್ಲಿ ಒಂದು ವಿಶೇಷ ಸಾಧನವ್ನ ಅಳವಡಿಸಲಾಗಿದೆ. ಇದರ ಸಹಾಯದಿಂದ ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ಆಪರೇಟ್‌ ಮಾಡಬಹುದಾಗಿದೆ. ಹಾಗೂ ಇದರ ಎಲ್ಲಿಕುಳಿತಾದರೂ ಲೈವ್‌ ಲೊಕೇಷನ್‌ ವೀಕ್ಷಿಸಬಹುದಾಗಿದೆ. ಅಲ್ಲದೇ ಫಿಂಗರ್‌ ಪ್ರಿಂಟ್‌ ಸೆನ್ಸಾರ್‌ ಕೂಡ ಇದ್ದು ಅತ್ಯಂತ ಸೇಫ್‌ ಆಗಿದೆ. ಇಂತಹ ಸೈಕಲ್‌ ತಯಾರಿಸಬೇಕೆಂಬುದು ನನ್ನ ಬಾಲ್ಯದ ಕನಸಾಗಿತ್ತು. ನಾನು ಎಂಟನೇ ತರಗತಿಯಲ್ಲಿರುವಾಗಲೇ ಕನಸು ಕಂಡಿದ್ದೆ. ಈಗ ಈ ಕನಸು ನನಸಾಗಿದೆ. ಈ ಬೈಕ್‌ ತಯಾರಿಸಲು ನನಗೆ ನಾಲ್ಕುವರ್ಷಗಳು ಬೇಕಾದವು” ಎನ್ನುತ್ತಾನೆ ಸಾಮ್ರಾಟ್‌ ನಾಥ್.‌

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!