Wednesday, August 10, 2022

Latest Posts

”ನನ್ನ ಬಯೋಪಿಕ್‌ಗೆ ಅನುಷ್ಕಾ ಹೀರೋಯಿನ್ ಆದ್ರೆ, ನಾನೇ ಹೀರೋ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಯಾರಿಗಿಷ್ಟ ಇಲ್ಲ ಹೇಳಿ? ಈ ಜೋಡಿ ಸಿಕ್ಕಿದ್ದು, ಇಷ್ಟಪಟ್ಟಿದ್ದು ಎಲ್ಲವನ್ನೂ ಸೇರಿಸಿದರೆ ಅದೊಂದು ಸುಂದರ ಪ್ರೇಮಕತೆ ಆಗೋದು ಗ್ಯಾರೆಂಟಿ.

You held on to nothing with greed: Anushka Sharma posts heartfelt note as Virat Kohli gives up Test captaincy, Sports News | wionews.comಕ್ರಿಕೆಟಿಗರ ಜೀವನವನ್ನು ಸಿನಿಮಾ ಮಾಡೋದಕ್ಕೆ ಸಾಕಷ್ಟು ನಿರ್ದೇಶಕರು ಉತ್ಸಾಹ ತೋರಿದ್ದಾರೆ. ವಿರಾಟ್ ಜೀವನದ ಏರಿಳಿತಗಳು ಬಯೋಪಿಕ್‌ಗೆ ಹೇಳಿಮಾಡಿಸಿದಂತಿದೆ. ಒಂದು ವೇಳೆ ವಿರಾಟ್ ಬಯೋಪಿಕ್ ಬಂದರೆ ಅದರಲ್ಲಿ ಹೀರೋಯಿನ್ ಯಾರಾಗ್ತಾರೆ ಎಂಬೆಲ್ಲಾ ವಿಷಯಗಳ ಬಗ್ಗೆ ಸಂದರ್ಶನದಲ್ಲಿ ವಿರಾಟ್ ಮಾತನಾಡಿದ್ದಾರೆ.

Anushka Sharma recalls Virat Kohli's journey as he steps down as Test captain: 'Sat next to you with tears in your eyes' | Bollywood - Hindustan Timesಒಂದು ವೇಳೆ ವಿರಾಟ್ ಬಯೋಪಿಕ್‌ಗೆ ಅನುಷ್ಕಾ ಶರ್ಮಾರೇ ಖುದ್ದು ಹೀರೋಯಿನ್ ಆದರೆ, ವಿರಾಟ್ ಹೀರೋ ಆಗೋಕೆ ರೆಡಿನಾ ಎಂದು ಸಂದರ್ಶಕರು ಪ್ರಶ್ನಿಸಿದ್ದು. ಅನುಷ್ಕಾ ನನ್ನ ಸಿನಿಮಾಗೆ ಹೀರೋಯಿನ್ ಆದರೆ ನಾನೇ ಹೀರೋ ಆಗಬೇಕು ಎಂದು ವಿರಾಟ್ ಹೇಳಿಕೊಂಡಿದ್ದಾರೆ.

What Virat Kohli, Anushka Sharma said after daughter's face revealed at India vs South Africa ODIಅನುಷ್ಕಾ ಬಂದ ನಂತರ ತನ್ನ ಜೀವನ ಬದಲಾಗಿದೆ. ಕಷ್ಟ ಎಂದಾಗ ಕೊಂಚವೂ ಪ್ಯಾನಿಕ್ ಆಗದೇ ಅನುಷ್ಕಾ ಯಾವಾಗಲೂ ನನ್ನ ಜೊತೆ ಇದ್ದಾಳೆ. ಅವಳು ಹೀರೋಯಿನ್ ಆದರೆ ನಾನು ಖಂಡಿತ ಹೀರೋ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ಈ ಕ್ಯೂಟ್ ಜೆಲಸಿ ಕಂಡು ಅಭಿಮಾನಿಗಳು ವಿರಾಟ್ ಆಸೆ ಈಡೇರಲಿ ಅಂತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss