ಲೇಡಿ ಸೂಪರ್‌ ಸ್ಟಾರ್‌ ಅನುಷ್ಕಾ ಶೆಟ್ಟಿ ಹುಟ್ಟು ಹಬ್ಬ ಸಂಭ್ರಮ: ಅಭಿಮಾನಿಗಳಿಂದ ಶುಭ ಹಾರೈಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೂಪರ್‌ನಿಂದ ಸಿಂಗಮ್‌ವರೆಗೆ, ಅರುಂಧತಿಯಿಂದ ರುದ್ರಮದೇವಿವರೆಗೆ ಯಾವುದೇ ಪಾತ್ರವಾದರೂ ಪರ್ಫೆಕ್ಟ್ ನಾಯಕಿ ಎಂದಾಕ್ಷಣ ಎಲ್ಲರ ಮನಸಿಗೆ ಬರುವ ಹೆಸರು ಅನುಷ್ಕಾ ಶೆಟ್ಟಿ. ಇಂದು ಟಾಲಿವುಡ್ ಜೇಜಮ್ಮನಿಗೆ ಹುಟ್ಟುಹಬ್ಬದ ಸಂಭ್ರಮ. ಅನುಷ್ಕಾ ಶೆಟ್ಟಿ ಹುಟ್ಟಿದ್ದು 1981ರ ನವೆಂಬರ್ 7ರಂದು. ಇಂದು ತಮ್ಮ 41 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಾಯಕಿ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸಾಮಾಜಿಕ ವೇದಿಕೆಯ ಮೂಲಕ ಬರ್ತಡೇಗೆ ಶುಭ ಹಾರೈಸುತ್ತಿದ್ದಾರೆ. ಮೂಲತಃ ಮಂಗಳೂರಿನವರಾದ ಅನುಷ್ಕಾ ತನ್ನ ಶಾಲಾ ಕಾಲೇಜು ಶಿಕ್ಷಣವನ್ನೆಲ್ಲ ಬೆಂಗಳೂರಿನಲ್ಲೇ ಮುಗಿಸಿದ್ದಾರೆ.

ಅನುಷ್ಕಾ ಶೆಟ್ಟಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ತನ್ನ ಸೌಂದರ್ಯ ಮತ್ತು ನಟನೆಯಿಂದಲೂ ಎಲ್ಲರನ್ನು ಆಕರ್ಷಿಸಿದ್ದಾರೆ. ಡ್ಯಾಶಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ನಿರ್ದೇಶನದ ʻಸೂಪರ್ʼ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅನುಷ್ಕಾ  ಆಗಲೇ ದಕ್ಷಿಣದಲ್ಲಿ ಟಾಪ್ ಹೀರೋಯಿನ್ ಸ್ಥಾನಮಾನ ಗಳಿಸಿದರು.

ಕೋಡಿ ರಾಮಕೃಷ್ಣ ನಿರ್ದೇಶನದ ಮತ್ತು ಮಲ್ಲೇಮಾಲ ನಿರ್ಮಿಸಿದ ಅರುಂಧತಿ ತನ್ನ ವೃತ್ತಿಜೀವನವನ್ನು ಸಂಪೂರ್ಣವಾಗಿ ಬದಲಾಯಿತು. ಇದರೊಂದಿಗೆ ಆಕೆಯ ಕ್ರೇಜ್ ಏಕಾಏಕಿ ಹೆಚ್ಚಿದ್ದು, ಹೀರೋಗಳಿಗೆ ಸರಿಸಮನಾದ ಅಭಿಮಾನಿ ಬಳಗವನ್ನು ಪಡೆದುಕೊಂಡಿದ್ದಾರೆ. ಬಾಹುಬಲಿಯಲ್ಲಿ ದೇವಸೇನಾ ಪಾತ್ರ ಅನುಷ್ಕಾಗೆ ಮತ್ತೊಂದು ಮೈಲಿಗಲ್ಲು ಎಂದು ಹೇಳಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!