ಸೂರ್ಯಕುಮಾರ್ ಯಾದವ್ ಹಾಡಿಹೊಗಳಿದ ದ್ರಾವಿಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂರ್ಯಕುಮಾರ್ ಯಾದವ್ ಇದೀಗ ತಮ್ಮ ಬೆಸ್ಟ್ ಫಾರ್ಮ್‌ನಲ್ಲಿದ್ದಾರೆ. ಸೂರ್ಯಕುಮಾರ್ ಬ್ಯಾಟಿಂಗ್‌ನಿಂದ ಇಂಪ್ರೆಸ್ ಆಗಿರುವ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಸೂರ್ಯಕುಮಾರ್ ಇದೀಗ ಬೆಸ್ಟ್ ಫಾರ್ಮ್‌ನಲ್ಲಿದ್ದಾರೆ ಅವರ ಬ್ಯಾಟಿಂಗ್ ನೋಡೋದೆ ಚೆಂದ ಎಂದು ಹೇಳಿದ್ದಾರೆ.

ಜಿಂಬಾಬೆ ವಿರುದ್ಧದ ಪಂದ್ಯದಲ್ಲೂ ಸೂರ್ಯಕುಮಾರ್ ಅರ್ಧಶತಕ ಬಾರಿಸಿ ಮಿಂಚಿದ್ದಾರೆ, ಆಟಗಾರರು ಫಾರ್ಮ್‌ನಲ್ಲಿದ್ದಾಗ ಅವರ ಆಟ ನೋಡುವುದೇ ಖುಷಿ ವಿಚಾರ ಎಂದು ದ್ರಾವಿಡ್ ಹೊಗಳಿದ್ದಾರೆ.

ಜಿಂಬಾಬೆ ವಿರುದ್ಧದ ಪಂದ್ಯದಲ್ಲಿ ಕೇವಲ 25 ಎಸೆತದಲ್ಲಿ 61ರನ್ ಸಿಡಿಸಿದ್ದಾರೆ. ಈ ಪಿಚ್‌ನಲ್ಲಿ ಇಷ್ಟು ಚೆನ್ನಾಗಿ ಆಡೋದು ಸುಲಭದ ಮಾತಲ್ಲ, ಸೂರ್ಯಗೆ ಆಡುವ ಟೆಕ್ನಿಕ್ ಚೆನ್ನಾಗಿ ಗೊತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!