ಅಪ್ತಾಪ್ತ ವಯಸ್ಕ ಬಾಲಕಿಯನ್ನು ವಿವಾಹವಾಗಿದ್ದ ಅಂಕಲ್ ಅರೆಸ್ಟ್ !

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಣದ‌ ಆಮಿಷ ತೋರಿಸಿ ಬಾಲಕಿಯನ್ನು‌‌‌ ಪುಸಲಾಯಿಸಿ 14ರ ಅಪ್ತಾಪ್ತ ವಯಸ್ಕ ಬಾಲಕಿಯನ್ನು ಬಾಲ್ಯವಿವಾಹ ಮಾಡಿಕೊಂಡಿರುವ ಆರೋಪದಡಿ 45 ವರ್ಷದ ವ್ಯಕ್ತಿಯನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.
ಗುರುಪ್ರಸಾದ್ (45) ಬಂಧಿತ ಆರೋಪಿ. ಯಲಹಂಕ ನ್ಯೂಟೌನ್ ಬಳಿಯ ಚಿಕ್ಕಬೆಟ್ಟಹಳ್ಳಿ ವಾಸವಾಗಿದ್ದ ಗುರುಪ್ರಸಾದ್ ಜೆಸಿಬಿ ಮಾಲೀಕನಾಗಿದ್ದ. ಆರ್ಥಿಕವಾಗಿ ಸದೃಢವಾಗಿದ್ದ. ಕೌಟುಂಬಿಕ ಕಾರಣಕ್ಕಾಗಿ 20 ವರ್ಷಗಳ ಹಿಂದೆಯೇ ಪತ್ನಿಯಿಂದ ದೂರವಾಗಿದ್ದ. ಈತನಿಗೆ 17 ವರ್ಷದ ಮಗನಿದ್ದಾನೆ.‌ ತಾನು ವಾಸಮಾಡುತ್ತಿದ್ದ ಏರಿಯಾದಲ್ಲಿ ಬಾಲಕಿ ಕುಟುಂಬ ವಾಸವಾಗಿತ್ತು. ಆರ್ಥಿಕವಾಗಿ ಹಿಂದುಳಿದಿದ್ದ ಬಾಲಕಿಯ ಪೋಷಕರಿಗೆ ಮೂವರು ಹೆಣ್ಣು‌ ಮಕ್ಕಳಿದ್ದಾರೆ. ಕುಟುಂಬದ ಅಸಹಾಯಕತೆ ಬಂಡವಾಳ ಮಾಡಿಕೊಂಡ ಗುರುಪ್ರಸಾದ್ ಪೋಷಕರ ಬಳಿ ಮಗಳನ್ನು ವಿವಾಹವಾಗುವುದಾಗಿ ಹೇಳಿದ್ದಾನೆ. ಆರ್ಥಿಕವಾಗಿ ಹಣದ ಸಹಾಯ ಮಾಡುವುದಾಗಿ ನಂಬಿಸಿದ್ದಾನೆ.‌ ಆರಂಭದಲ್ಲಿ ವಿವಾಹಕ್ಕೆ ಒಪ್ಪದ ಪೋಷಕರು ಕಾಲಕ್ರಮೇಣ ಆರೋಪಿಯ ಮನವಿ‌‌‌‌ ಪುರಸ್ಕರಿಸಿದ್ದಾರೆ‌.
ಅಪ್ರಾಪ್ತೆ ಮೇಲೆ‌ ಒತ್ತಡ ಹೇರಿ ದೇವಸ್ಥಾನವೊಂದರಲ್ಲಿ ಬಾಲ್ಯವಿವಾಹವಾಗಿದ್ದಾನೆ. ಇತ್ತೀಚೆಗೆ ಇಷ್ಟವಿಲ್ಲದ ಮದುವೆ ಬಗ್ಗೆ ಬಾಲಕಿ ಪರಿಚಯಸ್ಥರ ಬಳಿ ನೋವು ತೋಡಿಕೊಂಡಿದ್ದಳು‌.‌ ಈ ಸಂಬಂಧ‌ ಶಂಕರ್ ನಾಗ್ ಎಂಬುವರು ನೀಡಿದ‌ ದೂರಿನ ಮೇರೆಗೆ ಬಾಲ್ಯವಿವಾಹವಾಗಿದ್ದ ಗುರುಪ್ರಸಾದ್ ನನ್ನು ಬಂಧಿಸಿದರೆಸಿದ್ದು, ವಿವಾಹಕ್ಕೆ ಸಹಕರಿಸಿದ ಬಾಲಕಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!