ಎ.ಆರ್‌. ರೆಹಮಾನ್‌ ಮಗಳ ನಿಶ್ಚಿತಾರ್ಥ: ಸಂತಸ ಹಂಚಿಕೊಂಡ ಪುತ್ರಿ ಖತೀಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಿನಿರಂಗದಲ್ಲಿ ಇತ್ತೀಚೆಗೆ ಮದುವೆ ಸುದ್ದಿಗಳು ಹೆಚ್ಚಾಗಿದ್ದು, ಈಗ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್‌ ಅವರ ಮಗಳು ಖತೀಜಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಡಿ.29ಕ್ಕೆ ಎಂಗೇಜ್‌ಮೆಂಟ್‌ ಆಗಿದ್ದು, ಈ ವಿಷಯವನ್ನು ಸೋಷಿಯಲ್‌ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಎ.ಆರ್‌. ರೆಹಮಾನ್‌ ಗೆ ಮೂವರು ಮಕ್ಕಳು. ಅದರಲ್ಲಿ ಇಬ್ಬರು ಪುತ್ರಿಯರು. ಈಗ ಮೊದಲನೆ ಮಗಳು ಖತೀಜಾ ರೆಹಮಾನ್‌ ಅವರು ರಿಯಾಸ್ದೀನ್‌ ಶೇಖ್‌ ಮೊಹಮ್ಮದ್‌ ಅವರೊಂದಿಗೆ ನಿಶ್ಚಿತಾರ್ಥ ನಡೆದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್‌ ಮಾಡಿರುವ ಖತೀಜಾ ‘ದೇವರ ಆಶೀರ್ವಾದದಿಂದ ಡಿ.29ರಂದು ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಜೊತೆ ನನ್ನ ನಿಶ್ಚಿತಾರ್ಥ ನೆರವೇರಿತು ಅಂತ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್​ ಶೇಖ್​ ಮೊಹಮ್ಮದ್​ ಅವರು ಉದ್ಯಮಿ ಮತ್ತು ಆಡಿಯೋ ಇಂಜಿನಿಯರ್​ ಆಗಿದ್ದಾರೆ. ನನ್ನ ಹುಟ್ಟುಹಬ್ಬದ ದಿನವೇ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಿತು ಎಂದು ಬರೆದುಕೊಂಡಿದ್ದಾರೆ.
ಇನ್ನು ಖತೀಜಾ ಕೂಡ ಹಲವಾರು ತಮಿಳು ಚಿತ್ರಗಳಿಗೆ ಹಾಡು ಹಾಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!