ಆರ್ಚರಿ ವಿಶ್ವಕಪ್‌: ಭಾರತೀಯ ಜೋಡಿಗೆ ಚಿನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಅಭಿಷೇಕ್ ವರ್ಮಾ ಮತ್ತು ಜ್ಯೋತಿ ಸುರೇಖಾ ಜೋಡಿಯು ಬಿಲ್ಲುಗಾರಿಕೆಯ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದಿದೆ. ಕಂಪೌಂಡ್ ಮಿಕ್ಸೆಡ್ ಟೀಮ್ ವಿಭಾಗದಲ್ಲಿ ಅವರು ಫ್ರಾನ್ಸಿನ ಸೋಫಿ ಡೋಡೆಮಾಂಟ್ ಮತ್ತು ಜೀನ್ ಫಿಲಿಪ್ ಜೋಡಿಯನ್ನು ಸೋಲಿಸಿದರು.
ಆರ್ಚರಿ ವಿಶ್ವಕಪ್‌ನಲ್ಲಿ ಇದು ಭಾರತದ ಮೊದಲ ಚಿನ್ನವಾಗಿದೆ.
ಅಭಿಷೇಕ್ ಮತ್ತು ಜ್ಯೋತಿ ಫೈನಲಿನಲ್ಲಿ ಫ್ರಾನ್ಸಿನ ಜೋಡಿಯನ್ನು 152- 149 ಅಂಕಗಳಿಂದ ಸೋಲಿಸಿತು. ಸೆಮಿಫೈನಲಿನಲ್ಲಿ ಅವರು ಎಸ್ತೋನಿಯಾದ ಜೋಡಿಯನ್ನು ಸೋಲಿಸಿದ್ದರು.
ಭಾನುವಾರ ಮತ್ತೊಂದು ವಿಭಾಗದಲ್ಲಿ ದೀಪಿಕಾ ಕುಮಾರಿ ಚಿನ್ನದ ಪದಕಕ್ಕಾಗಿ ಸೆಣಸಲಿದ್ದು ಈ ವಿಭಾಗದಲ್ಲಿ ಭಾರತಕ್ಕೆ ಪದಕವೊಂದು ಖಾತರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!