ತಾಪಮಾನ ಹೆಚ್ಚಳದಿಂದ ಕರಗುತ್ತಿದೆ ಆರ್ಕ್ಟಿಕ್: ಆತಂಕಕಾರಿ ವರದಿ ಹೊರ ಹಾಕಿದೆ ನಾಸಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇತ್ತೀಚಿನ ಹವಾಮಾನದಲ್ಲಾಗುತ್ತಿರುವ ವ್ಯಾಪಕ ಬದಲಾವಣೆಯಿಂದಾಗಿ ಅತ್ಯಂತ್‌ ಹೆಚ್ಚು ಶೀತಮಯ ಪ್ರದೇಶವಾಗಿ ಹಿಮಗಡ್ಡೆಗಳಿಂದ ಆವೃತವಾಗಿರೋ ಆರ್ಕ್ಟಿಕ್ ಪ್ರದೇಶವು ಕರಗುತ್ತಿದ್ದು ಸೆಪ್ಟೆಂಬರ್ 18 ರಂದು ವಾರ್ಷಿಕ ಕನಿಷ್ಠ ವ್ಯಾಪ್ತಿಯನ್ನು ತಲುಪಿದೆ ಎಂದು ನಾಸಾದ ವರದಿ ಹೇಳಿದೆ.

ಹಿಮದ ಹೊದಿಕೆಯು ಈ ವರ್ಷ 4.67 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ಪ್ರದೇಶಕ್ಕೆ ಕುಗ್ಗಿದೆ, ಇದು 1981-2010ರ ಸರಾಸರಿಗಿಂತ ಸರಿಸುಮಾರು 1.55 ದಶಲಕ್ಷ ಚದರ ಕಿಲೋಮೀಟರ್‌ಗಳಷ್ಟು ಕಡಿಮೆಯಾಗಿದೆ.

ಉಪಗ್ರಹಗಳನ್ನು ಬಳಸಿಕೊಂಡು ಹಿಮದ ಹೊದಿಕೆಯನ್ನು ಪತ್ತೆಹಚ್ಚುವ ನಾಸಾ, ಆರ್ಕ್ಟಿಕ್ ಮಹಾಸಾಗರದಲ್ಲಿ ಮತ್ತು ಸುತ್ತಮುತ್ತಲಿನ ಬೇಸಿಗೆಯ ಹಿಮದ ಪ್ರಮಾಣವು ಗಣನೀಯವಾಗಿ ಕುಸಿದಿದೆ ಎಂದು ವರದಿ ಮಾಡಿದೆ. ಕಳೆದ 16 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವು ದಾಖಲಾಗುತ್ತಿದ್ದು 2022ರಲ್ಲಿ 10ನೇ ಕಡಿಮೆ ಹಿಮಗಡ್ಡೆಗಳನ್ನು ಹೊಂದಿದೆ ಎಂದು ಹೇಳಿದೆ.

ಇದರಿಂದಾಗಿ ಆರ್ಕ್ಟಿಕ್ ಪ್ರದೇಶದ ಸಮುದ್ರದ ಮಂಜುಗಡ್ಡೆಯ ಹೊದಿಕೆಯು ದಾಖಲೆಯ ಮಟ್ಟಕ್ಕೆ ಇಳಿದಿದ್ದು ಇದರಿಂದಾಗಿ ಸಾಗರದಲ್ಲಿನ ನೀರಿನ ಮಟ್ಟವೂ ಹೆಚ್ಚಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಜಾಗತಿಕ ಸಮುದ್ರ ಮಟ್ಟದ ಮೇಲೆ ಪ್ರಭಾವ ಬೀರುವುದರ ಹೊರತಾಗಿ, ಆರ್ಕ್ಟಿಕ್ ಮಂಜುಗಡ್ಡೆಯು ಆಕಾಶದಲ್ಲಿನ ಮೋಡಗಳ ಮೇಲೆ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಎಂದು ವಿಶ್ಲೇಷಣೆಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!