Monday, October 2, 2023

Latest Posts

MUST READ | ಜೀವನದಲ್ಲಿ ನೂರಾರು ದೂರುಗಳಿದ್ಯಾ? ಹಾಗಿದ್ರೆ ಈ ವಿಡಿಯೋ ನೋಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜೀವನದ ಬಗ್ಗೆ ದೂರುಗಳಿಲ್ಲದೇ ಹೋದ್ರೆ ಹೇಗೆ? ಬೆಳಗಿನ ಕಾಫಿಗೆ ಸಕ್ಕರೆ ಚೂರು ಕಡಿಮೆಯಾಯ್ತು ಎಂದು ಶುರುವಾಗುವ ದೂರುಗಳು, ರಾತ್ರಿ ಫ್ಯಾನ್‌ನ ಕಿರ್ ಕಿರ್ ಶಬ್ದದೊಂದಿಗೆ ಮುಕ್ತಾಯವಾಗುತ್ತವೆ.

ಎಲ್ಲವೂ ಇದ್ದು ಜೀವನವನ್ನು ದೂರುವ ವ್ಯಕ್ತಿ ನೀವಾಗಿದ್ದರೆ ತಪ್ಪದೇ ಈ ವಿಡಿಯೋ ನೋಡಿ. ಈ ಜಾಗ ಯಾವುದೆಂದು ತಿಳಿದಿಲ್ಲ, ಮರಳುಗಾಡು ಪ್ರದೇಶ ಇದಾಗಿದ್ದು, ಮಹಿಳೆಯರಿಬ್ಬರು ನೀರಿಗಾಗಿ ಪರಿತಪಸಿಸುತ್ತಿದ್ದಾರೆ. ಮಗಳನ್ನು ಜೊತೆಗೆ ಕರೆತಂದಿದ್ದು, ಬಿಸಿಲಿನ ಬೇಗೆಗೆ ಅಂಜದೇ ಜೀವಜಲವನ್ನು ತೆಗೆಯುತ್ತಾರೆ.

ಬಾವಿಯಲ್ಲಿ ನೀರು ಸೇದೋದು ಕಷ್ಟ ಎಂದು ಭಾವಿಸುವುದಾದರೆ ಇದನ್ನು ಏನು ಹೇಳಬಹುದು, ಪೈಪ್‌ನಂಥ ಕೊಳವೆಯಲ್ಲಿ ನೀರು ಸೇದಿ ತಮ್ಮ ಬಕೆಟ್‌ಗಳಿಗೆ ಹಾಕುತ್ತಿದ್ದಾರೆ. ಈ ವಿಡಿಯೋ ನೋಡಿದಮೇಲೆ ನಿಮಗನಿಸಲ್ವಾ? ನಿಮ್ಮ ಜೀವನ ಎಷ್ಟು ಸುಲಭವಾಗಿದೆ ಅಂತ?!

https://twitter.com/TheFigen_/status/1666107628231983106?s=20

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!