NEW BORNS | ಮೊದಲ ಬಾರಿಗೆ ಪೋಷಕರಾಗಿದ್ದೀರಾ? ನ್ಯೂ ಬಾರ್ನ್ ಮಗುವಿನ ಆರೈಕೆ ಹೀಗೆ ಮಾಡಿ..

ನೀವು ಈಗ ಪೋಷಕರಾಗಿದ್ದೀರಾ? ನಿಮ್ಮ ನ್ಯೂ ಬಾರ್ನ್‌ನ್ನು ಮುಟ್ಟೋದಕ್ಕೂ ಹೆದರಿಕೊಳ್ತೀರಾ? ನೀವು ಇದನ್ನು ಓದಲೇಬೇಕು.. ಈಗಿನ್ನೂ ಹುಟ್ಟಿದ ಮಕ್ಕಳನ್ನು ಕಾಳಜಿ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ..

  • ಮಗುವನ್ನು ಮುಟ್ಟೋ ಮುನ್ನ ಸ್ಯಾನಿಟೈಸರ್ ಕಡ್ಡಾಯ, ಕೈ ತೊಳೆದು ಮುಟ್ಟಿ, ಯಾರೇ ಮುಟ್ಟಲು ಬಂದರೂ ಕೈ ತೊಳೆದು ಮುಟ್ಟಲು ಕೊಡಿ.
  • ಮಗುವಿನ ತಲೆ ಹಾಗೂ ಕತ್ತಿಗೆ ನಿಮ್ಮ ಕೈಗಳ ಸಹಾಯ ಬೇಕು, ಕತ್ತು ಹಾಗೂ ಕುತ್ತಿಗೆ ಅಡಿಗೆ ಸಪೋರ್ಟ್ ನೀಡಿಯೇ ಮಗುವನ್ನು ಎತ್ತಿಕೊಳ್ಳಿ.
  • ನಿಮ್ಮ ಮಗು ರಫ್ ಆಗಿ ಆಟ ಆಡೋದಕ್ಕೆ ಇನ್ನೂ ತಯಾರಿಲ್ಲ. ಮೇಲಕ್ಕೆ ಎತ್ತಿ ಹಾರಿಸೋದು, ಹೇಗೆ ಬೇಕಂದ್ರೆ ಹಾಗೆ ಹ್ಯಾಂಡಲ್ ಮಾಡೋದು ತಪ್ಪು, ಇದು ಪರ್ಮನೆಂಟ್ ಬ್ರೇನ್ ಡ್ಯಾಮೇಜ್‌ಗೂ ಕಾರಣವಾಗಬಹುದು.
  • ಮಗುವಿಗೆ ಸ್ವಾಡಲ್ ಮಾಡಿ ಮಲಗಿಸಿ, ಕೈ ಕಾಲು ಆಡಲು ಹೆಚ್ಚು ಜಾಗ ಇಲ್ಲದೆ ಹೋದರೆ ಹೆಚ್ಚು ಹೊತ್ತು ಮಲಗುತ್ತಾರೆ, ತಾಯಿಯ ಹೊಟ್ಟೆಯಲ್ಲಿ ಇದ್ದಷ್ಟು ಜಾಗ ಮಾತ್ರ ಇದೆ ಎಂದು ಮಕ್ಕಳಿಗೆ ಅನಿಸುತ್ತದೆ.
  • ಈಗಿನ್ನೂ ಹುಟ್ಟಿದ ಮಕ್ಕಳಿಗೆ ಹಣೆಗೆ ಕಾಡಿಗೆ, ಕಣ್ಣಿಗೆ ಕಾಡಿಗೆ ಹಚ್ಚೋದು ಬೇಡ, ಇದರಲ್ಲಿರುವ ಲೆಡ್ ಅಂಶದಿಂದ ಮಕ್ಕಳಿಗೆ ತೊಂದರೆ ಆಗುತ್ತದೆ.
  • ಯಾವುದೇ ಅನುಮಾನ ಬಂದರೂ ವೈದ್ಯರನ್ನು ಕಾಣಬೇಕು, ಅವರಿವರ ಮಾರ್ಗದರ್ಶನದಂತೆ ಮಕ್ಕಳನ್ನು ನೋಡಿಕೊಳ್ಳಬೇಡಿ.
  • ಆರು ತಿಂಗಳವರೆಗೆ ಮಕ್ಕಳಿಗೆ ತಾಯಿಯ ಹಾಲನ್ನು ಬಿಟ್ಟು ಬೇರೇನೂ ಕೊಡುವಂತಿಲ್ಲ.
  • ಒಂದು ವರ್ಷದವರೆಗೆ ಉಪ್ಪು, ಎರಡು ವರ್ಷದವರೆಗೆ ಸಕ್ಕರೆ ಕೊಡುವಂತಿಲ್ಲ.
  • ಮಕ್ಕಳಿಗೆ ಸದಾ ಡೈಪರ್ ಹಾಕುವ ಬದಲು ಆಗಾಗ ಬಟ್ಟೆಯ ನ್ಯಾಪಿ ಹಾಕಿ
  • ಆದರೆ ಇದು ಒದ್ದೆಯಾದ ತಕ್ಷಣ ಬದಲಾಯಿಸಿ ಇಲ್ಲವಾದರೆ ರ‍್ಯಾಶಸ್ ಆಗಬಹುದು.
  • ಮಗು ಎರಡೂವರೆ ಕೆಜಿಗಿಂತ ಕಡಿಮೆ ಇದ್ದರೆ ಬರೀ ಸ್ಪಂಜ್ ಬಾತ್ ಮಾತ್ರ ಮಾಡಿಸಬೇಕು.
  • ಹೊಕ್ಕಳು ಬಳ್ಳಿ ಉದುರಿದ ನಂತರ ಅದು ಗುಣವಾಗೋಕೆ ಸಮಯ ಬೇಕಾಗುತ್ತದೆ. ಅಲ್ಲಿಯವರೆಗೆ ಹೊಕ್ಕಳಿನಲ್ಲಿ ನೀರು ಸೇರದಂತೆ ಸರಿಯಾಗಿ ಒರೆಸಿ.
  • ಮಕ್ಕಳಿಗೆ ಪ್ಯಾಟರ್ನ್ ಸೆಟ್ ಮಾಡಿ, ಇಲ್ಲದೆ ಹೋದರೆ ಮುಂದೆ ಪೋಷಕರಿಗೇ ಕಷ್ಟ. ಇಷ್ಟು ಹೊತ್ತಿಗೆ ಹಾಲು, ಇಷ್ಟು ಹೊತ್ತಿಗೆ ನಿದ್ದೆ ಹೀಗೆ ಅಭ್ಯಾಸ ಮಾಡಿಸಿ.
  • ಮಗುವನ್ನು ಮನೆಗೆ ಕರೆದುಕೊಂಡು ಬಂದ ದಿನದಿಂದಲೂ ಮಕ್ಕಳ ಜತೆ ಮಾತನಾಡಿ, ಅವರ ಭಾಷಾ ಜ್ಞಾನ ಹೆಚ್ಚುತ್ತದೆ. ಬೇಗ ಮಾತನಾಡುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!