ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬ ಹರಿದಿನಗಳಲ್ಲಿ, ಅಥವಾ ಸುಮ್ಮನೆ ಕೊಂಡರೂ ಹೊಸ ಬಟ್ಟೆಗಳನ್ನು ಒಗೆಯದೆ ಹಾಗೆಯೇ ಧರಿಸಬಾರದು. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು. ಅದಕ್ಕೆ ಮುಖ್ಯ ಕಾರಣ ಹೊಸ ಬಟ್ಟೆಗಳನ್ನು ಇಡುವ ಜಾಗ ಹೇಗಿದೆಯೋ ಗೊತ್ತಿಲ್ಲ..ಎಲ್ಲೋ ಇಟ್ಟು ತರುತ್ತಾರೆ..ಕ್ರಿಮಿ ಕೀಟ, ಬ್ಯಾಕ್ಟೀರಿಯಾ, ಸೂಕ್ಷ್ಮಾಣು ಜೀವಿಗಳು ಖಂಡಿತಾ ಇರುತ್ತವೆ. ಅದಕ್ಕಾಗಿಯೇ ಹೊಸ ಬಟ್ಟೆಗಳನ್ನು ಬಳಸುವ ಮೊದಲು ಒಮ್ಮೆ ತೊಳೆಯಬೇಕು.
ಬಟ್ಟೆಗಳನ್ನು ತಯಾರಿಸಲು ಅನೇಕ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇಂದಿನ ದಿನಗಳಲ್ಲಿ ರೆಡಿಮೇಡ್ ಬಟ್ಟೆಗಳು ಎಲ್ಲೆಂದರಲ್ಲಿ ಸಿಗುತ್ತವೆ. ಅವುಗಳ ತಯಾರಿಕೆಯಲ್ಲಿ ವಿವಿಧ ಬಣ್ಣಗಳು ಮತ್ತು ಇತರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಬಟ್ಟೆಯ ಪಾಲಿಶ್ ಮತ್ತು ಪ್ರಿಂಟಿಂಗ್ ನಲ್ಲಿ ಹಲವು ಕೆಮಿಕಲ್ ಗಳನ್ನು ಬಳಸುತ್ತಾರೆ.. ಹಾಗಾಗಿ ಬಳಸುವ ಮುನ್ನ ಸ್ವಚ್ಛಗೊಳಿಸುವುದು ಉತ್ತಮ.
ಹೊಸ ಬಟ್ಟೆಗಳನ್ನು ಧರಿಸಿದಾಗ, ತುರಿಕೆ ಮತ್ತು ಕಿರಿಕಿರಿಯನ್ನು ಅನುಭವಿಸುತ್ತೀರಿ. ಅವುಗಳಲ್ಲಿರುವ ಬ್ಯಾಕ್ಟೀರಿಯಾಗಳು ಇದಕ್ಕೆ ಕಾರಣ. ಅಲ್ಲದೆ, ಹೊಸ ಬಟ್ಟೆಗಳು ಬೆವರು ಮತ್ತು ನೀರನ್ನು ಹೆಚ್ಚು ಹೀರಿಕೊಳ್ಳುವುದಿಲ್ಲ.
ಮುಖ್ಯವಾಗಿ ಮಕ್ಕಳು ಮತ್ತು ಗರ್ಭಿಣಿಯರು ಹೊಸ ಬಟ್ಟೆಗಳನ್ನು ಧರಿಸುವ ಮುನ್ನ ಒಮ್ಮೆ ಒಗೆದುಬಿಡಿ. ಇದು ರೋಗಗಳನ್ನು ತಪ್ಪಿಸಲು ಸಹಾಯಮಾಡುತ್ತದೆ. ಇಲ್ಲವಾದರೆ ಇನ್ ಫೆಕ್ಷನ್ ಆಗುವ ಅಪಾಯವಿದೆ. ಅದಕ್ಕೇ ತೊಳೆದು ಒಣಗಿಸಿದ ನಂತರ ಹೊಸ ಬಟ್ಟೆ ಧರಿಸುವುವುದು ಉತ್ತಮ.