ಸಕಲೇಶಪುರದಲ್ಲಿ ಚಿರತೆಯನ್ನೇ ಹೊಲುವ ಬೆಕ್ಕಿನ ಮರಿಗಳು ಪತ್ತೆ!

ಹೊಸದಿಗಂತ ವರದಿ ಸಕಲೇಶಪುರ:

ನಗರದ ಚಾಮುಂಡೇಶ್ವರಿ ಲೇಔಟ್ ಬಳಿ ಇಂದು ಮುಂಜಾನೆ ಚಿರತೆಯನ್ನೇ ಹೋಲುವ ಬೆಕ್ಕಿನ ಮರಿಗಳು ಕಾಣಿಸಿಕೊಂಡಿವೆ.

ಈಗಾಗಲೇ ಸಕಲೇಶಪುರದ ಜನತೆ ಕಾಡಾನೆಗಳ ಉಪಟಳ ಹಾಗೂ ಕಾಡುಕೋಣಗಳು ಅಲ್ಲಲ್ಲಿ ಕಾಣಿಸಿಕೊಂಡು ಭಯಭೀತರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ‌. ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿರುವುದು ದಿನೇ ದಿನೇ ಹೆಚ್ಚಾಗುತ್ತಿದ್ದು, ಇಂದು ಮುಂಜಾನೆ ನ್ಯಾಯವಾದಿ ಮದನ್ ರವರು ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಮೂರು ಚಿರತೆಯನ್ನೇ ಹೊಲುವ ಬೆಕ್ಕಿನ ಮರಿಗಳು ಕಾಣಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಸಾರ್ವಜನಿಕರು ಹಾಗೂ ಮಕ್ಕಳು ಸಂಚಾರ ಮಾಡುವಾಗ ಜಾಗ್ರತೆ ವಹಿಸುವಂತೆ ಮದನ್ ಹೇಳಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!