Wednesday, June 7, 2023

Latest Posts

ಸುಡಾನ್‌ ಕದನ ವಿರಾಮ: 72 ಗಂಟೆಗಳ ಕಾಲ ವಿಸ್ತರಣೆಗೆ ಸಶಸ್ತ್ರ ಪಡೆಗಳ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸುಡಾನ್ ಸಶಸ್ತ್ರ ಪಡೆಗಳು ಮತ್ತು ಕ್ಷಿಪ್ರ ಬೆಂಬಲ ಪಡೆಗಳು ಪ್ರಸ್ತುತ ಕದನ ವಿರಾಮವನ್ನು ಹೆಚ್ಚುವರಿ 72 ಗಂಟೆಗಳವರೆಗೆ ವಿಸ್ತರಿಸುವ ಘೋಷಣೆಗೆ ಒಪ್ಪಿಗೆ ಸೂಚಿಸಿರುವುದಾಗಿ ಟ್ರೈಲ್ಯಾಟರಲ್ ಮೆಕ್ಯಾನಿಸಂ ದಿ ಕ್ವಾಡ್ ಆನ್ ಸುಡಾನ್ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

ಆಫ್ರಿಕನ್ ಯೂನಿಯನ್, ಅಭಿವೃದ್ಧಿಯ ಅಂತರ್ ಸರ್ಕಾರಿ ಪ್ರಾಧಿಕಾರ, ಯುನೈಟೆಡ್ ನೇಷನ್ಸ್ ಮತ್ತು ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಕ್ವಾಡ್ ಅನ್ನು ಒಳಗೊಂಡಿರುವ ತ್ರಿಪಕ್ಷೀಯ ಕಾರ್ಯವಿಧಾನವು ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ. 72 ಗಂಟೆಗಳ ಕದನ ವಿರಾಮದ ಘೋಷಣೆ ಮತ್ತು ಅದರ ಸಂಪೂರ್ಣ ಅನುಷ್ಠಾನಕ್ಕೆ ಕರೆ ನೀಡಿದರು.

ರಾಜಧಾನಿ ಖಾರ್ಟೌಮ್ ಮತ್ತು ಪಶ್ಚಿಮ ಡಾರ್ಫರ್ ಪ್ರದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ಮಧ್ಯೆ ಸುಡಾನ್ ಸೇನೆ ಮತ್ತು ಅರೆಸೇನಾ ಕ್ಷಿಪ್ರ ಬೆಂಬಲ ಪಡೆಗಳು (RSF) ತಮ್ಮ ಕದನ ವಿರಾಮವನ್ನು ವಿಸ್ತರಿಸಲು ಒಪ್ಪಿಕೊಂಡಿವೆ. ಮೂರು ದಿನಗಳ ಕದನ ವಿರಾಮದ ಅಂತಿಮ ಸಮಯ ಗುರುವಾರ ಮಧ್ಯರಾತ್ರಿ (22:00 GMT) ಅಂತ್ಯಗೊಳ್ಳಲಿರುವ ಕಾರಣ, ಸೌದಿ ಅರೇಬಿಯಾ ಮತ್ತು ಮಧ್ಯಸ್ಥಿಕೆ ಪ್ರಯತ್ನಗಳ ನಂತರ “ಹೆಚ್ಚುವರಿ 72 ಗಂಟೆಗಳ ಕಾಲ” ಕದನ ವಿರಾಮವನ್ನು ವಿಸ್ತರಿಸುವುದಾಗಿ ಸೇನೆಯು ಹೇಳಿದೆ.

ಕದನ ಹಿನ್ನೆಲೆ ನೂರಾರು ಸಾಮಾನ್ಯ ಜನರು ಸುರಕ್ಷಿತ ಪ್ರದೇಶಗಳಿಗೆ ಪಲಾಯನ ಮಾಡಲು ಮತ್ತು ವಿದೇಶಿ ರಾಷ್ಟ್ರಗಳು ತಮ್ಮ ನಾಗರಿಕರನ್ನು ಭೂಮಿ ಮತ್ತು ಸಮುದ್ರದ ಮೂಲಕ ಸ್ಥಳಾಂತರಿಸುತ್ತಿದೆ. ಕದನ ವಿರಾಮದ ಲಾಭ ಪಡೆದುಕೊಂಡು, ಭಾರತವು ಇದುವರೆಗೆ ಎಂಟು ಬ್ಯಾಚ್‌ಗಳಲ್ಲಿ ಸಿಲುಕಿರುವ ಭಾರತೀಯರನ್ನು ಜೆಡ್ಡಾ ಮೂಲಕ ಭಾರತಕ್ಕೆ ಕರೆತರುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!