ಚುನಾವಣೆ ಮಾದರಿ ನೀತಿ ಸಂಹಿತೆ: ದಾಖಲೆಗಳಿಲ್ಲದ 1.32 ಕೋಟಿ ರೂ.ನಗದು ವಶ

ಹೊಸದಿಗಂತ ವರದಿ,ಹಾಸನ :

ಲೋಕಸಭೆ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಒಟ್ಟು ೧,೩೨,೮೦,೫೯೨ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ತಿಳಿಸಿದರು.

ಚುನಾವಣೆ ಪೂರ್ವ ಸಿದ್ಧತೆ ಕುರಿತು ನಗರದ ಡಿಸಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪರವಾನಗಿ ಇಲ್ಲದ ೯,೭೬,೪೯,೭೩೧ ರೂ ಮೌಲ್ಯದ ಒಟ್ಟು ೫,೬೮,೮೨೨.೯೨ ಲೀಟರ್ ಮದ್ಯ, ೬,೫೦೦ ರೂ ಬೆಲೆಯ ೦.೧೨೭ ಗ್ರಾಂ ಮಾದಕ ವಸ್ತುಗಳು, ೫,೦೦,೬೫೧ ರೂ ಬೆಲೆಯ ೧೧೧ ವಿವಿಧ ಉಡುಗೊರೆ ವಸ್ತುಗಳನ್ನು ಅಧಿಕಾರಿಗಳು ದಸ್ತಗಿರಿ ಮಾಡಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಮಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ೭೦, ಎಫ್‌ಎಸ್‌ಟಿ. ೮, ಹಾಗೂ ೧೩೦೪ ಅಬಕಾರಿ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಏಳು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರ ಒಳಗೊಂಡು ಹಾಸನ ಲೋಕಸಭಾ ಕ್ಷೇತ್ರದಲ್ಲಿ ೮,೬೩,೭೨೭ ಪುರುಷರು, ೮,೭೨,೮೪೦ ಮಹಿಳೆಯರು ಹಾಗೂ ೪೩ ಇತರರು ಒಳಗೊಂಡು ಒಟ್ಟು ೧೭,೩೬,೬೧೦ ಮತದಾರರಿದ್ದಾರೆ. ಈ ಪೈಕಿ ೮೫ ವರ್ಷ ಮೇಲ್ಪಟ್ಟ ೨೬೩೬, ದಿವ್ಯಾಂಗರು ೧೩೭೩ ಹಾಗೂ ೨೯,೩೬೪ ಹೊಸ ಮತದಾರರು ಸೇರಿದ್ದಾರೆ. ಈ ಬಾರಿಯ ಚುನಾವಣೆಗೆ ಒಟ್ಟು ೨೨೨೧ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು-೩೨ ಸಖಿ/ಪಿಂಕ್ ಮತಗಟ್ಟೆಗಳು, ಎಥ್ನಿಕ್-೧೨, ಮಾದರಿ ಮತಗಟ್ಟೆಗಳು-೨, ಯುವ ಮತಗಟ್ಟೆ-೧೦, ದಿವ್ಯಾಂಗ ಮತಗಟ್ಟೆಗಳು-೭ ಸ್ಥಾಪನೆಯಾಗಿವೆ. ನೀತಿ ಸಂಹಿತ ಉಲ್ಲಂಘನೆ ಹಿನ್ನೆಲೆಯಲ್ಲಿ ಒಟ್ಟು ೧೦೫೬ ದೂರುಗಳು ದಾಖಲಾಗಿವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!