ಅರೆಭಾಷೆ ಸಂಸ್ಕೃತಿ-ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ

ಹೊಸದಿಗಂತ ವರದಿ, ಮಡಿಕೇರಿ:

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಮೂವರನ್ನು ಆಯ್ಕೆ ಮಾಡಲಾಗಿದೆ‌.
ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆಗೆ ಪಿ.ಜಿ. ಅಂಬೆಕಲ್, ರಂಗಭೂಮಿ ಕ್ಷೇತ್ರದಲ್ಲಿನ ಸಾಧನೆಗೆ ತುಕರಾಂ ಏನೆಕಲ್ಲು ಹಾಗೂ ಸಂಸ್ಕೃತಿ ಕ್ಷೇತ್ರದಲ್ಲಿನ ಸಾಧನೆಗೆ ಚಂಡೀರ ಬಸಪ್ಪ ಅವರುಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಪಿ.ಜಿ.ಅಂಬೆಕಲ್ (ಪುಟ್ಟಣ್ಣ ಗೌಡ ಅಂಬೆಕಲ್) ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಪೈಲಾರುವಿನಲ್ಲಿ ಜನಿಸಿದ್ದು, ಎಂ.ಎ, ಬಿಇಡಿ ಪದವಿ ಪಡೆದಿರುವ ಇವರು ಕೊಡಗು ಜಿಲ್ಲೆಯ ಚೆಟ್ಟಳ್ಳಿ ಫ್ರೌಢಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತಿ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಇವರ ತಬ್ಲಿ ಮಂಞ-ಅರೆಭಾಷೆ ಕಥಾಸಂಕಲನ, ಗೂಡೆ ಬೇಕಾಗುಟ್ಟು-ಅರೆಭಾಷೆ ನಾಟಕಗಳ ಜೊಂಪೆ ನಿನ್ನ ಪ್ರೇಮದ ಪರಿಯ-ಕನ್ನಡ ಕಥಾ ಸಂಕಲನ ಪ್ರಕಟಿತ ಕೃತಿಗಳಾಗಿದ್ದು, ಅವರವರ ಕಣ್ಣ್‍ಲಿ- ಅರೆಭಾಷೆ ಕಥಾಸಂಕಲನ ಅಚ್ಚಿನಲ್ಲಿದೆ.
ಇವರು ಹಲವಾರು ಅರೆಭಾಷೆ ಲೇಖನಗಳ ಮೂಲಕ ಅರೆಭಾಷೆ ಸಮುದಾಯಕ್ಕೆ ಚಿರಪರಿಚಿತರಾಗಿದ್ದು, ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು ಮಾತ್ರವಲ್ಲದೆ ಹಲವಾರು ಶಾಲಾ ವಿದ್ಯಾರ್ಥಿಗಳನ್ನು ಕೂಡಾ ರಂಗಕ್ಕೆ ಕರೆ ತಂದಿದ್ದಾರೆ. .
ತುಕರಾಮ ಏನೆಕಲ್ಲು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಗ್ರಾಮದವರಾದ ಇವರು ವೃತ್ತಿಯಲ್ಲಿ ಕಾಲೇಜು ದೈಹಿಕ ನಿರ್ದೇಶಕರಾಗಿದ್ದು, ಈಗ ನಿವೃತ್ತರು. 23 ವರ್ಷದಲ್ಲಿ 26 ನಾಟಕ ನಿರ್ಮಾಣ ಮಾಡಿ ಅರೆಭಾಷೆ ಪರಿಸರದ ಹಲವಾರು ಗ್ರಾಮೀಣ ಪ್ರತಿಭೆಗಳನ್ನು ಆಧುನಿಕ ರಂಗಭೂಮಿಗೆ ಕರೆತಂದು ರಂಗ ಶಿಕ್ಷಣ ನೀಡಿರುತ್ತಾರೆ. ಇವರ ನೇತೃತ್ವದಲ್ಲಿ ನಿರ್ಮಾಣಗೊಂಡ ಮಹಮಾಯಿ (ನಿರ್ದೇಶನ ಜೀವನರಾಂ, ಸುಳ್ಯ) ಚಿತ್ರಪಟ, ಹರಿಣಾಭಿಸರಣ (ನಿರ್ದೇಶನ-ಮಂಜುನಾಥ ಬಡಿಗೇರ್) ಸಿರಿಸಂಪಿಗೆ (ನಿರ್ದೇಶನ-ಕೃಷ್ಣಮೂರ್ತಿ ಕವತ್ತಾರು) ನಾಟಕಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿದೆ. ಇವರಿಗೆ ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ 2010 ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ. ಇತ್ತಿಚೇಗೆ ದ.ಕ ಜಿಲ್ಲಾ ಸಿ.ಜಿ.ಕೆ ರಂಗ ಪ್ರಶಸ್ತಿಗೂ ಇವರು ಭಾಜನರಾಗಿರುತ್ತಾರೆ.
ಚಂಡೀರ .ಕೆ.ಬಸಪ್ಪ: ಕೊಡಗು ಜಿಲ್ಲೆಯ, ಮಡಿಕೇರಿ ತಾಲೂಕಿನ ಕೋಕೇರಿ ಗ್ರಾಮದ ಚಂಡೀರ ಕೆ.ಬಸಪ್ಪ ಅವರು ಎಸ್‍ಎಸ್‍ಎಲ್‍ಸಿ ವಿದ್ಯಾಬ್ಯಾಸದ ನಂತರ ಭಾರತೀಯ ಭೂ ಸೇನೆಯಲ್ಲಿ ಸುಬೇದಾರ್ ಆಗಿ ನಿವೃತ್ತಿ ಹೊಂದಿದ್ದು, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ಇವರು ಅರೆಭಾಷೆಯಲ್ಲಿ ಶ್ರೀ ಮಾತೆ ಕಾವೇರಿ ಸುಪ್ರಭಾತ ರಚನೆ, ಶ್ರೀ ಪಾಡಿ ಇಗ್ಗುತಪ್ಪ ದೇವರ ಸುಪ್ರಭಾತ ರಚನೆ, ಅರೆಭಾಷೆಯಲ್ಲಿ ದೇವರ ನಾಮಗಳ ರಚನೆ ಹೀಗೆ ಅರೆಭಾಷೆಯಲ್ಲಿ ಕೃತಿ ರಚನೆ ಅಲ್ಲದೆ ಸೋಬಾನೆ ಹಾಡುಗಾರರಾಗಿ ಜೊತೆಗೆ ಅರೆಭಾಷೆ ಸಂಸ್ಕಯøತಿಯ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡು ಮೈಸೂರು ನಗರದ ಬಹು ಸಂಸ್ಕೃತಿಯ ವಾತಾವರಣದಲ್ಲಿ ಅರೆಭಾಷೆ ಸಂಸ್ಕೃತಿ ಉಳಿಸಲು ಪಣತೊಟ್ಟಿರುವುದು ಇವರ ವಿಶೇಷತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!