ಟ್ವಿಟರ್ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ: ಉ.ಕ. ಜಿಲ್ಲೆಗೆ ಆಸ್ಪತ್ರೆ ನೀಡುವೆ ಎಂದ ಆರೋಗ್ಯಸಚಿವ!

ಹೊಸದಿಗಂತ ವರದಿ, ಅಂಕೋಲಾ:

ಉತ್ತರ ಕನ್ನಡ ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಟ್ವಿಟರ್ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದಂತೆಯೇ ರಾಜಕಾರಣಿಗಳು ನಾಮುಂದು- ತಾ ಮುಂದು ಎಂದು ಬೆಂಬಲ ನೀಡತೊಡಗಿದ್ದಾರೆ.
ಸೋಮವಾರ ಮಧ್ಯಾಹ್ನದಷ್ಟರಲ್ಲಿ ಟ್ವಿಟರ್ ಅಭಿಯಾನಕ್ಕೆ 16 ಸಾವಿರಕ್ಕೂ ಹೆಚ್ಚು ಜನ ಬೆಂಬಲ ವ್ಯಕ್ತಮಾಡಿದ್ದಾರೆ. ಈ ಅಭಿಯಾನ ಮುಂದುವರೆದಿದೆ.
ಈ ಹಿನ್ನೆಲೆಯಲ್ಲಿ ಇದುವರೆಗೂ ಈ ಬೇಡಿಕೆಯ ಕುರಿತಾಗಿ ಹೇಳಿಕೆಯನ್ನಷ್ಟೇ ನೀಡಿ ಜನರನ್ನು ತಣಿಸುತ್ತಿದ್ದವರಿಗೆ ಈಗ ಈ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಭೂತ ಮುಂಬರುವ ಚುನಾವಣೆಯಲ್ಲಿ ತಮ್ಮ ತಳ ಅಲ್ಲಾಡಿಸುವ ಭೀತಿ ತಂದಿಟ್ಟಿದೆ. ಹೀಗಾಗಿ ಈಗ ರಾಜಕಾರಣಿಗಳೂ ಎಚ್ಚೆತ್ತಿದ್ದಾರೆ.
ಟ್ವಿಟರ್ ಸದ್ದು :
ಪ್ರಧಾನಿ ಮಂತ್ರಿ ನರೇಂದ್ರ ಮೋದಿಜಿ, ಅಮಿತ್ ಷಾ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಅರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಟ್ಯಾಗ್ ಮಾಡಿ ಉತ್ತರ ಕನ್ನಡಕ್ಕೊಂದು ಎಮರ್ಜೆನ್ಸಿ ಆಸ್ಪತ್ರೆಯ ಬೇಡಿಕೆ ಇಟ್ಟು ಭಾನುವಾರ ಸಂಜೆ ಪ್ರಾರಂಭವಾದ ಅಭಿಯಾನ ಟ್ವಿಟರ್ ನಲ್ಲಿ ಟ್ರೆಂಡಿಗ್ ಆಗಿತ್ತು.
ಅಭಿಯಾನ ಪ್ರಾರಂಭ ಆಗುವ ಮುನ್ನವೇ ಜಿಲ್ಲೆಯ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು, ಉತ್ತರ ಕನ್ನಡ ಜಿಲ್ಲೆಯ ಹೃದಯ ಭಾಗದ ಕುಮಟಾದ ಆಸುಪಾಸಿನಲ್ಲಿ ಸಧ್ಯದಲ್ಲೇ ಸುಸಜ್ಜಿತ ಮಲ್ಟಿಸ್ಪೇಷಾಲಿಟಿ ಆಸ್ಪತ್ರೆ ಆರಂಭಿಸುವ ಬಗ್ಗೆ ಅಧಿಕೃತ ಮಾಹಿತಿ ನೀಡಲಿದ್ದೇನೆ ಎಂದು ಟ್ವಿಟ್ ಮಾಡಿದ್ದು ವಿಶೇಷ.
ನಂತರದಲ್ಲಿ ಈ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ,ಕುಮಾರಸ್ವಾಮಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್, ಶಾಸಕಿ ರೂಪಾಲಿ ನಾಯ್ಕ, ಶಾಸಕರಾದ ಸುನಿಲ್ ನಾಯ್ಕ, ದಿನಕರ ಶೆಟ್ಟಿ ಕೂಡ ಬೆಂಬಲ ವ್ಯಕ್ತಪಡಿಸುವ ಮೂಲಕ ತಾವು ಜನರೊಂದಿಗೆ ಇದ್ದೇವೆ ಎಂದು ತೋರಿಸಿಕೊಂಡಿದ್ದಾರೆ.

ಕೊನೆಗೆ ಆರೋಗ್ಯ ಸಚಿವ ಡಾ. ಸುಧಾಕರ ಅವರೂ ಈಗ ಟ್ವೀಟ್ ಮಾಡಿ ಕಾರವಾರದಲ್ಲಿ ಟ್ರಾಮಾ ಸೆಂಟರ್ ಮತ್ತು ಉ.ಕ ಜಿಲ್ಲೆಯಲ್ಲಿ , ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಆರಂಭ ಮಾಡುವ ಬಗ್ಗೆ ಸಿಎಂ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಮಾತನಾಡಿದ್ದಾರೆ.ಇದು ಜನತಾಅಭಿಯಾನ ತಂದ ಬಿಸಿಯ ಪರಿಣಾಮವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!