ಮೊದಲು ‘ಭಾರತ್​ ಮಾತಾ ಕಿ ಜೈ’ ಘೋಷಣೆ ಕೂಗಿದ್ದು ಮುಸ್ಲಿಮರು: ಕೇರಳ ಸಿಎಂ ಪಿಣರಾಯಿ ವಿಜಯನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೊದಲು ಭಾರತ್​ ಮಾತಾ ಕಿ ಜೈ ಘೋಷಣೆಯನ್ನು ಕೂಗಿದವರು ಮುಸ್ಲಿಮರು. ಹಾಗಾಗಿ ಬಿಜೆಪಿ ಹಾಗೂ ಆರ್​ಎಸ್​ಎಸ್​ನವರು ಈ ಘೋಷಣೆಯನ್ನು ಕೂಗುವುದನ್ನು ಬಿಡುತ್ತಾರೆಯೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪ್ರಶ್ನಿಸಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಅವರು, ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಂ ದೊರೆಗಳು, ಸಾಂಸ್ಕೃತಿಕ ದಿಗ್ಗಜರು ಮತ್ತು ಅಧಿಕಾರಿಗಳು ಗಣನೀಯ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ನಾವು ಜನರಿಂದ ಭಾರತ್ ಮಾತಾ ಕಿ ಜೈ ಎಂದು ಹೇಳಿಸುವುದನ್ನು ನೋಡಿದ್ದೇವೆ. ಆದ್ರೆ ಈ ಘೋಷಣೆಯನ್ನು ಹುಟ್ಟಿ ಹಾಕಿದ್ದು ಯಾರೆಂದು ಗೊತ್ತಾ ?.

19ನೇ ಶತಮಾನದಲ್ಲಿ ಅಝಿಮುಲ್ಲಾ ಖಾನ್ ಎಂಬ ವ್ಯಕ್ತಿಯೂ ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಯನ್ನು ಮೊದಲ ಬಾರಿಗೆ ಹುಟ್ಟು ಹಾಕಿದರು. ಈ ಘೋಷಣೆಯನ್ನು ಹುಟ್ಟು ಹಾಕಿದ್ದು ಮುಸ್ಲಿಂ ವ್ಯಕ್ತಿ . ಇದೀಗ ಈ ಘೋಷಣೆಯನ್ನು ಸೃಷ್ಟಿಸಿದ್ದು ಓರ್ವ ಮುಸ್ಲಿಂ ವ್ಯಕ್ತಿ ಎನ್ನುವುದು ಗೊತ್ತಾದ ಬಳಿಕ ಅವರು ಈ ಘೋಷಣೆ ಕೂಗುವುದನ್ನು ನಿಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕನ ರಿಯಾಕ್ಷನ್
ಪಿಣರಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುದ್ಧಾಂಶು ತ್ರಿವೇದಿ, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅಝಿಮುಲ್ಲಾ ಖಾನ್ ಮದರ್-ಎ-ವತನ್, ಭಾರತ್ ಕಿ ಜೈ ಎಂಬ ಘೋಷಣೆಯನ್ನು ಹುಟ್ಟು ಹಾಕಿದರು. ಅದಕ್ಕೂ ಮೊದಲು 1873ರಲ್ಲಿ ಕಿರಣ್ ಚಂದ್ರ ಬಂಡೋಪಾಧ್ಯಾಯ ಅವರ ನಾಟಕದಲ್ಲಿ ಭಾರತ್​ ಮಾತಾ ಕಿ ಜೈ ಎಂಬ ಘೋಷವಾಕ್ಯವನ್ನು ಉಲ್ಲೇಖಿಸಲಾಗಿತ್ತು. ಆದರೆ, ನಾವು ನೋಡಿರುವ ಹಾಗೆ ಕೇಳಿರುವ ಪ್ರಕಾರ 1873 ರಲ್ಲಿ ಕಿರಣ್ ಚಂದ್ರ ಬಂಡೋಪಾಧ್ಯಾಯ ಅವರ ನಾಟಕದಲ್ಲಿ ಇದನ್ನು ಮೊದಲು ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ನಾಯಕ ಶುದ್ಧಾಂಶು ತ್ರಿವೇದಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!