ಬುತ್ತಿ ಕಟ್ಟಿ ತಂದು ರೈಲಿನಲ್ಲಿ ಹಂಚಿಕೊಂಡು ತಿನ್ನುತ್ತಿದ್ದರ ಅರೆಸ್ಟ್: ಕಾರಣ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: 

ರೈಲಿನ ಪ್ರಯಾಣ ಅಂದಾಗ ಸಾಮಾನ್ಯವಾಗಿ ಪ್ರಯಾಣಿಕರು ಬುತ್ತಿ ಕಟ್ಟಿ ತಂದು ರೈಲಿನಲ್ಲಿ ಹಂಚಿಕೊಂಡು ತಿನ್ನುತ್ತಾರೆ. ಅದು ದೂರದ ಪ್ರಯಾಣ ಸಮಯ ತುಂಬಾ ಅನಿವಾರ್ಯ ಕೂಡ.

ಇನ್ನು ಈ ಸಮಯಪ್ರಯಾಣಕ್ಕೆ ಜೊತೆಯಾದ ಸಹಪ್ರಯಾಣಿಕರಿಗೂ ಕೆಲವರು ಆಹಾರ ನೀಡುತ್ತಾರೆ. ಆದರೆ ಇಲ್ಲಿ ರೈಲಿನಲ್ಲಿ ಆಹಾರ ಹಂಚಿ ತಿನ್ನುತ್ತಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ.

ಅರೇ ಫುಡ್ ಹಂಚಿ ತಿಂದರೆ ಯಾಕೆ ಬಂಧಿಸುತ್ತಾರೆ ಅಂತ ಯೋಚನೆ ಬರಬಹುದು.ಅದಕ್ಕೆ ಕಾರಣ ಬುತ್ತಿಯ ಹಂಚಿ ತಿನ್ನುತ್ತಿದ್ದವರ ಬಂಧನದ ಹಿಂದೆ ಅಡಗಿತ್ತು ದೊಡ್ಡ ಮಾಫಿಯಾ.

ಹೌದು, ರೈಲಿನಲ್ಲಿ ಬುತ್ತಿಕಟ್ಟಿಕೊಂಡು ತುಂಬು ಕುಟುಂಬದಂತೆ ಪ್ರಯಾಣ ನಡೆಸುತ್ತಿದ್ದವರು ಡ್ರಗ್ ಸಾಗಣೆ ಜಾಲದ ಭಾಗವಾಗಿದ್ದರು. ಮೇಲ್ನೋಟಕ್ಕೆ ತುಂಬಾ ಸುಂದರವಾದ ಮರ್ಯಾದಸ್ಥ ಕುಟುಂಬದಂತೆ ಕಾಣುತ್ತಿದ್ದ ಇವರ ಇಡೀ ಕುಟುಂಬವೇ ಡ್ರಗ್ ಜಾಲದಲ್ಲಿ ತೊಡಗಿತ್ತು. ಇವರು ದೊಡ್ಡದಾದ ಬ್ಯಾಗುಗಳನ್ನು ಹಿಡಿದುಕೊಂಡು ನಗು ನಗುತ್ತಾ ರೈಲು ಏರಿದ್ದರು. ಅಲ್ಲದೇ ತಮ್ಮದೊಂದು ಮರ್ಯಾದಸ್ಥ ಕುಟುಂಬ ಎಂಬ ಸೋಗು ಹಾಕುವುದಕ್ಕಾಗಿ ತಾವು ಊಟ ಮಾಡುತ್ತಾ ತಾವು ತಂದ ಆಹಾರವನ್ನು ರೈಲಿನಲ್ಲಿದ್ದ ಇತರರಿಗೂ ಹಂಚಿದ್ದರು. ಆದರೆ ಈ ವಿಚಾರವನ್ನು ಮೊದಲೇ ಅರಿತಿದ್ದ ಪೊಲೀಸರು ಇವರನ್ನು ಬಂಧಿಸುವುದಕ್ಕಾಗಿ ಇವರಿಗಿಂತ ಚೆನ್ನಾಗಿ ಸೋಗು ಹಾಕಿದ್ದರು.

ಕವಚ್‌ ಕೋಡ್‌ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಈ ಸಂಬಂಧ ರೈಲಿನಲ್ಲಿ ನಿಯಮಿತವಾಗಿ ಪ್ರಯಾಣ ಮಾಡುತ್ತಿದ್ದ 45 ವರ್ಷದ ಮಹಿಳೆ ಅನಿತಾ ಅಲಿಯಾಸ್ ಮನೋ, 26 ವರ್ಷದ ಅಮಾನ್ ರಾಣಾ ಹಾಗೂ 16 ವರ್ಷದ ಹುಡುಗಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ದೆಹಲಿಯ ವಿಶೇಷ ಪೊಲೀಸ್ ಕಮೀಷನ್‌ ದೆಬೆಶ್ ಶ್ರೀವಾಸ್ತವ ಅವರ ನೇತೃತ್ವದಲ್ಲಿ ‘ಕವಚ್‌ ಕೋಡ್‌’ ಹೆಸರಿನ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯಿಂದ ಈ ಡ್ರಗ್‌ ಸಾಗಾಟ ಜಾಲದಲ್ಲಿ ಇಡೀ ಕುಟುಂಬವೇ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸ್‌ ಇಲಾಖೆಯ ಕ್ರೈಂ ಬ್ರಾಂಚ್‌ ಪೊಲೀಸರು ಈ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಿಂದ ಸಂಪೂರ್ಣ ಡ್ರಗ್ ಜಾಲವೇ ಬಯಲಾಗಿದ್ದು, ಬಂಧಿತರಿಂದ ಬೇರೆ ಬೇರೆ ಪ್ರದೇಶಗಳಲ್ಲಿ ಇರಿಸಿದ್ದ 400 ಕೇಜಿ ಡ್ರಗ್‌ನ್ನು ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಈ ಡ್ರಗ್ ಜಾಲದ ಇನ್ನೂ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!