ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ಹಗರಣದಲ್ಲಿ ಬಂಧನದ ಅಲೆ ದೇಶವನ್ನೇ ಬೆಚ್ಚಿಬೀಳಿಸುತ್ತಿದೆ. ದೆಹಲಿ ಲಿಕ್ಕರ್ ಹಗರಣ ತೆಲುಗು ರಾಜ್ಯಗಳ ರಾಜಕೀಯ ನಾಯಕರ ಹಿನ್ನಲೆಯಲ್ಲಿ ಮತ್ತೊಂದು ಬಂಧನವಾಗಿರುವುದು ಆಂಧ್ರಪ್ರದೇಶದ ಆಡಳಿತ ಪಕ್ಷಕ್ಕೆ ಪೆಟ್ಟು ಬಿದ್ದಿದೆ. ವೈಸಿಪಿ ಸಂಸದರ ಪುತ್ರನ ಬಂಧನವಾಗಿದ್ದು, ಆಡಳಿತ ಪಕ್ಷ ವೈಸಿಪಿ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವೈಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಅವರ ಪುತ್ರ ಮಾಗುಂಟ ರಾಘವ ಅವರನ್ನು ಬಂಧಿಸಿತ್ತು. ಹೀಗೆ ಬಂಧನದ ಸರಣಿಯನ್ನು ಮುಂದುವರಿಸಿದೆ.
ಬಾಲಾಜಿ ಗ್ರೂಪ್ ಮಾಲೀಕ ಮಾಗುಂಟ ರಾಘವ ದೆಹಲಿಯಲ್ಲಿ ಮದ್ಯ ವ್ಯಾಪಾರ ಮಾಡುತ್ತಿದ್ದು, ಕಳೆದ 70 ವರ್ಷಗಳಿಂದ ಮದ್ಯದ ವ್ಯಾಪಾರ ಮಾಡುತ್ತಿರುವ ಕುಟುಂಬ ದೆಹಲಿ ಮದ್ಯದ ಹಗರಣದಲ್ಲಿ ಸಿಲುಕಿಕೊಂಡಿದೆ. ಮಾಗುಂಟ ಕುಟುಂಬವು ದೇಶಾದ್ಯಂತ ಹಲವಾರು ಮದ್ಯದ ವ್ಯವಹಾರಗಳನ್ನು ಹೊಂದಿದೆ. ದೆಹಲಿ ಮದ್ಯ ಹಗರಣದಲ್ಲಿ ಈಗಾಗಲೇ ಸುಮಾರು 9 ಜನರನ್ನು ಬಂಧಿಸಲಾಗಿದೆ ವೈಸಿಪಿ ಸಂಸದ ಮಾಗುಂಟ ಶ್ರೀನಿವಾಸ್ ರೆಡ್ಡಿ ಪುತ್ರ ಮಾಗುಂಟ ರಾಘವನ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ವಶಕ್ಕೆ ಪಡೆದಿದ್ದು, ಮುಂದಿನ ಚುನಾವಣೆಯ ಈ ಹೊತ್ತಿನಲ್ಲಿ YCP ಸಂಸದ ಪುತ್ರನ ಬಂಧನದಿಂದ ಪಕ್ಷ ಬೆಚ್ಚಿಬಿದ್ದಿದೆ.
ಬಾಲಾಜಿ ಗ್ರೂಪ್‌ನ ಪ್ರತಿಷ್ಠಿತ ಡಿಸ್ಟಿಲರಿಗಳು, ಏಂಜೆಲ್ ಶಾಂಪೇನ್ ಎಲ್‌ಎಲ್‌ಪಿ ಮತ್ತು ತಮಿಳುನಾಡು ಡಿಸ್ಟಿಲರಿ ಇಂಡಸ್ಟ್ರಿಯಲ್ ಆಲ್ಕೋಹಾಲ್ ಪ್ರೈವೇಟ್ ಲಿಮಿಟೆಡ್‌ನ ಹೊರತಾಗಿ, ಮಾಗುಂಟ ಕುಟುಂಬಕ್ಕೆ ಸೇರಿದ ಎರಡು ಪ್ರಮುಖ ಕಂಪನಿಗಳು ಸಿಬಿಐ ರಾಡಾರ್ ಅಡಿಯಲ್ಲಿ ಬಂದಿವೆ. ಇವುಗಳ ತಯಾರಿಕೆ ಮತ್ತು ವಿತರಣೆಯಲ್ಲಿ ಹಲವು ಅಕ್ರಮಗಳು ನಡೆದಿರುವ ಆರೋಪಗಳಿವೆ. ದೆಹಲಿ ಮದ್ಯ ಹಗರಣದಲ್ಲಿ ಮಾಗುಂಟ ರಾಘವ ಪಾತ್ರದ ಕುರಿತು ಇಡಿ ತನಿಖೆ ನಡೆಸಲಿದೆ.