ನಶಿಸುತ್ತಿರುವ ವಿಶಿಷ್ಟ ಕಲಾಪರಂಪರೆಗೆ ಕಾಯಕಲ್ಪ: ಜಗದೀಶ ಹಿರೇಮನಿ

ಹೊಸದಿಗಂತ ವರದಿ ಬಾಗಲಕೋಟೆ:

ನಶಿಸಿ ಹೋಗುತ್ತಿರುವ ತಳಸಮುದಾಯದ ವಿಶಿಷ್ಟ ಕಲೆಗಳ ಕುರಿತು ಹಾಗೂ ಪೂರ್ವಜರು ಬೆಳೆಸಿಕೊಂಡು ಬಂದಂತಹ ಸಾಂಸ್ಕೃತಿಕ ಹಿನ್ನಲೆಯನ್ನು ಮುನ್ನಲೆಗೆ ತರಲು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಕಾರ್ಯಕ್ರಮವನ್ನು ಆಯೋಜಿಸಲು ಎಲ್ಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಮೂಲ ಸಂಸ್ಕೃತಿ ಕನ್ನಡ ಸಂಸ್ಕೃತಿ ಉತ್ಸವ ಸಮಿತಿಯ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ತಿಳಿಸಿದರು.

ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ‌ಸಂಸ್ಕೃತಿ ಕನ್ನಡ ಸಂಸ್ಕೃತಿ ಉಳಿಸಲು ಕಾರ್ಯಕ್ರಮ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಹಾಗೂ ಮುಖ್ಯಮಂತ್ರಿ ಗಳ ಗಮನಕ್ಕೆ ತಂದಾಗ ನಮಗೆ ಸಹಕಾರ ನೀಡಿದರು ಎಂದರು.

ರಾಜ್ಯದ 31 ಜಿಲ್ಲೆಗಳಲ್ಲಿ 5 ಕಲಾ ಪ್ರಕಾರಗಳಙತೆ ಹಾಗೂ ಪ್ರತಿ ಜಿಲ್ಲೆಗೆ 50ಜನ ಕಲಾಸಕ್ತರಿಗೆ ತರಬೇತಿ ನೀಡಲು ಯೋಜಿಸಿದೆ. 31 ಜಿಲ್ಲೆಗಳಲ್ಲಿ ತರಬೇತಿ ನಡೆಯುತ್ತಿದೆ ಎಂದರು. ಜಿಲ್ಲಾಮಟ್ಟದಲ್ಲಿ ತರಬೇತಿ ಪಡೆದ ಕಲಾ ತಂಡಗಳನ್ನು ಜಿಲ್ಲೆಯಿಂದ 2 ತಂಡ ಉತ್ಸವದಲ್ಲಿ ಭಾಗವಹಿಸಲಿವೆ. 62 ತಂಡ ಇದರಲ್ಲಿ ಭಾಗವಹಿಸಿವೆ.ರಾಜ್ಯದ 31 ಜಿಲ್ಲೆಯ 155 ಕಲಾ ಪ್ರಕಾರ 1550 ಯುವ ಶಿಬಿರಾರ್ಥಿಗಳು 155 ನುರಿತ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಹವಹಿಸಲಿದ್ದಾರೆ ಎಂದರು.

ರಾಜ್ಯ ಮಟ್ಟದ ಉತ್ಸವದ ಸಮಾವೇಶ ಸಮಾರೋಪ ಬೆಂಗಳೂರಿನ ಲ್ಲಿ ನಡೆಯಲಿದೆ. ರಾಷ್ಟ್ರಪತಿಯವರನ್ನು ಆಹ್ವಾನ ನೀಡಲಾಗಿದೆ ಎಂದರು. ನಶಿಸಿಹೋಗುತ್ತಿರುವ ತಳಸಮುದಾಯ ವಿಶಿಷ್ಟ ಕಲೆಗಳನ್ನು ಮುನ್ನಲೆಗೆ ತರಲು ವಿಶಿಷ್ಟ ಯೋಜನೆ ರೂಪಿಸಲಾಗಿದೆ.೫ ಕೋಟಿ ಅನುದಾನವನ್ನು ಸತ್ಕಾರ ನೀಡಿದೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸುವ ಕಲಾವಿದರಿಗೆ 300 ರೂ.‌ನೀಡಲಾಗುತ್ತಿದೆ.ಕುಟುಂಬದಲ್ಲಿ ಇರುವ ಕಲಾವಿದರು ಹಾಗೂ ಯುವಕರನ್ನು ತರಬೇತಿಗೆ ಬಳಸಿಕೊಳ್ಳಲಾಗಿದೆ.ಐದು ಕಲಾ ತಂಡಗಳನ್ನು ಜಿಲ್ಲೆಯಲ್ಲಿ ಆಯ್ಕೆ ಮಾಡಿ ತರಬೇತಿ ನೀಡಲಾಗುತ್ತಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!