ಎನ್‌ಎಂಪಿಟಿಗೆ ಆಗಮಿಸಿದ ವಿಲಾಸಿ ಪ್ರಯಾಣಿಕ ಹಡಗು!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕೋವಿಡ್ ಬಳಿಕ ಅಂದರೆ ಸುಮಾರು ಎರಡು ವರ್ಷಗಳ ಬಳಿಕ ಪ್ರಯಾಣಿಕ ಹಡಗೊಂದು ಸೋಮವಾರ ಇಲ್ಲಿನ ನವ ಮಂಗಳೂರು ಬಂದರಿಗೆ ಆಗಮಿಸಿದ್ದು, ಸಂಭ್ರಮದಿಂದ ಈ ಹಡಗನ್ನು ಸ್ವಾಗತಿಸಲಾಯಿತು.
ಯೂರೋಪ್‌ನ ಮಾಲ್ಟಾದಿಂದ ಈ ಹಡಗು ಆಗಮಿಸಿದೆ. 271 ಪ್ರಯಾಣಿಕರು ಹಾಗೂ 373 ಮಂದಿ ಹಡಗಿನ ಸಿಬ್ಬಂದಿಯೊಂದಿಗೆ ಆಗಮಿಸಿದ ಎಂಎಸ್ ಯುರೋಪ 2ಐ ಸೋಮವಾರ ಬೆಳಗ್ಗೆ 6.30ಕ್ಕೆ ನವ ಮಂಗಳೂರು ಬಂದರಿಗೆ ಆಗಮಿಸಿದೆ. 224.38 ಮೀಟರ್ ಉದ್ದ ಹಾಗೂ 29.99 ಮೀಟರ್ ಅಗಲದ ಈ ಪ್ರಯಾಣಿಕ ಹಡಗು ಗೋವಾದ ಮರ್ಮುಗಾಂವ್‌ನಿಂದ ಮಂಗಳೂರಿಗೆ ಆಗಮಿಸಿದ್ದು, ಇಲ್ಲಿಂದ ಕೊಚ್ಚಿನ್ ಬಂದರಿಗೆ ತೆರಳಿದೆ.
ಎನ್‌ಎಂಪಿಎಯ ಬಂದರು ಅಧಿಕಾರಿಗಳು ಪ್ರಯಾಣಿಕರ ಸೌಲಭ್ಯಕ್ಕೆ ಸಕಲ ಸಿದ್ಧತೆಗಳನ್ನು ಕಲ್ಪಿಸಿದ್ದು, ಹಡಗಿನಿಂದ ಇಳಿದು ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡುವ ಪ್ರಯಾಣಿಕರಿಗಾಗಿ ಬಸ್ಸು, ಕಾರುಗಳು, ಪ್ರೀಪೇಯ್ಡ್ ಟಾಕ್ಸಿಗಳ ವ್ಯವಸ್ಥೆಯನ್ನು ಕಲ್ಪಿಸಲಾಯಿತು.
ಪ್ರಯಾಣಿಕರು ಸಂತ ಅಲೋಶಿಯಸ್ ಕಾಲೇಜು, ಕುದ್ರೋಳಿ ದೇವಸ್ಥಾನ, ಮಾರುಕಟ್ಟೆ, ಗೇರುಬೀಜ ಕಾರ್ಖಾನೆ, ಉಡುಪಿ ದೇವಸ್ಥಾನ, ಗೋಮ್ಮಟೇಶ್ವರ, ಸಾವಿರ ಕಂಬದ ಬಸದಿ, ಫಾರಂ ಫಿಝಾ ಮಾಲ್ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿದರು. ಬಳಿಕ ಸಂಜೆ 3 ಗಂಟೆಯ ವೇಳೆಗೆ ಹಡಗು ಕೊಚಿನ್ ಬಂದರಿನತ್ತ ಎನ್‌ಎಂಪಿಟಿಯಿಂದ ನಿರ್ಗಮಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!