ಗುಜರಾತ್​ನಲ್ಲಿ ಅಬ್ಬರದ ಬಿಜೆಪಿ ಪ್ರಚಾರ: ಮತದಾರರನ್ನು ಆಕರ್ಷಿಸಿದ ಮೋದಿ ತದ್ರೂಪಿ ದೇವಾರಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭಾ ಚುನಾವಣೆ ದಿನಗಳು ಸಮೀಪ ಬರುತ್ತಿದ್ದಂತೆ ಗುಜರಾತ್‌ನ ಹಲವು ಭಾಗಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಬ್ಬರದ ಪ್ರಚಾರ ನಡೆದಿದೆ.

ಮೋದಿ ಅವರು ಕಚ್‌ನ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದು, ಈ ವೇಳೆ ಕಛ್‌ನ ಅಂಜಾರ್‌ನಲ್ಲಿ ಪ್ರಧಾನಿ ಅವರ ತದ್ರೂಪಿಯಂತಿರುವ ಲಾಲ್ಜಿ ದೇವಾರಿಯಾ ತಮ್ಮ ಚೇಷ್ಟೆಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿ ಆಕರ್ಷಣೆಯ ಕೇಂದ್ರಬಿಂದುವಾದರು.

ಅಪಾರ ಜನಸಮೂಹ ನಡುವೆಯೂ ಲಾಲ್ಜಿ ದೇವಾರಿಯಾ ಮೋದಿ ತರಹ ಸನ್ನೆ, ವಿಜಯದ ಚಿಹ್ನೆ ತೋರಿಸಿ ಪ್ರೇಕ್ಷಕರ ಹೃದಯ ಗೆದ್ದರು. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಲಾಲ್ಜಿ ದೇವರಿಯಾ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅತ್ತ ‘ಮೋದಿ, ಮೋದಿ…’ ಘೋಷಣೆಗಳು ಚುನಾವಣಾ ಯಲ್ಲಿ ಪ್ರತಿಧ್ವನಿಸುತ್ತಿದ್ದವು. ಇತ್ತ ಲಾಲ್ಜಿ ದೇವರಿಯಾ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!