ಕೊಟ್ಟ ಮಾತಿನಂತೆ ನಡೆದ ಬಿಜೆಪಿ ಸರ್ಕಾರ: ಶಿವರಾಜ ಪಾಟೀಲ

ಹೊಸ ದಿಗಂತ ವರದಿ, ಕಲಬುರಗಿ:

ಕೇಂದ್ರ ಸರ್ಕಾರ್‍ದ ನಿರ್ದೇಶನದಂತೆ ರಾಜ್ಯದ ಮಂತ್ರಿ ಮಂಡಲವು ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ಟಿಗೆ ಸೇರಿಸಿ,ಮೀಸಲಾತಿಯಲ್ಲಿ ಸೌಲಭ್ಯ ಕಲ್ಪಿಸಲಾಗಿದ್ದು, ಈ ಒಂದು ಐತಿಹಾಸಿಕ ನಿರ್ಣಯ ಕೈಗೊಂಡಿದ್ದಕ್ಕಾಗಿ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸುತೇವೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಗಿ ತಿಳಿಸಿದರು.
ಅವರು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 8,28,333 ಜನಸಂಖ್ಯೆ ಹೊಂದಿರುವ ತಳವಾರ ಸಮುದಾಯವು ಸಾಕಷ್ಟು ಅರ್ಹತೆಗಳನ್ನು ಹೊಂದಿದ್ದರು, ಸೌಲಭ್ಯಗಳಿಂದ ವಂಚಿತವಾಗಿದ್ದವು. ಆದರೆ 2014ರ ನಂತರದ ಅನೇಕ ಹೋರಾಟಗಳ ಪರಿಶ್ರಮದಿಂದಾಗಿ ಇಂದು ತಳವಾರ ಹಾಗೂ ಪರಿವಾರ ಸಮುದಾಯಕ್ಕೆ ಸವಲತ್ತುಗಳು ದೊರೆಯುವಂತಾಗಿದೆ ಎಂದರು.
ಕಳೆದ ಸಿಂದಗಿ ಹಾಗೂ ಬಸವ ಕಲ್ಯಾಣ ಉಪ ಚುನಾವಣೆಗಳ ಬಹಿರಂಗ ಸಮಾವೇಶಗಳಲ್ಲಿ ಹಾಗೂ ಪ್ರಮುಖವಾಗಿ ತಳವಾರ ಸಮುದಾಯದ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ಬಿಜೆಪಿ ನಾಯಕರು ಕೊಟ್ಟಂತಹ ಮಾತಿನಂತೆ ಈ ಐತಿಹಾಸಿಕ ನಿರ್ಣಯಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು, ಕೇಂದ್ರ ನಾಯಕರು ಸೇರಿದಂತೆ ರಾಜ್ಯದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಹಾಗೂ ನಮ್ಮ ಪಕ್ಷದ ಎಲ್ಲ ನಾಯಕರಿಗೂ ಸಮುದಾಯದ ವತಿಯಿಂದ ಅಭಿನಂದನಗೆಳನ್ನು ಸಲ್ಲಿಸುತ್ತೇವೆ ಎಂದರು.

ಕಾಡಾ ಅದ್ಯಕ್ಷ ಶರಣಪ್ಪಾ ತಳವಾರ ಮಾತನಾಡಿ, ತಳವಾರ ಮತ್ತು ಪರಿವಾರ ಸಮುದಾಯವನ್ನು ಎಸ್ಟಿ ಗೆ ಸೇರಿಸಿ, ಮೀಸಲಾತಿಯಲ್ಲಿ ಸೌಲಭ್ಯ ಸಿಕ್ಕಿದ ಪರಿಣಾಮ, ವಿಠ್ಠಲ ಹೇರೂರ ಸೇರಿದಂತೆ ಅನೇಕರ ಹೋರಾಟದ ಪರಿಶ್ರಮವಿದೆ. ಅವರ ನಿರಂತರ ಹೋರಾಟದ ಫಲವಾಗಿ ಇಂದು ರಾಜ್ಯ ಸರ್ಕಾರ ಮೀಸಲಾತಿಯಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ ಎಂದರು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಎಲ್ಲ ನಾಯಕರಿಗೂ ನಮ್ಮ ಸಮುದಾಯದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ನಗರ ಬಿಜೆಪಿ ಅಧ್ಯಕ್ಷ ಸಿದ್ದಾಜಿ ಪಾಟೀಲ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ,ಶೋಭಾ ಬಾಣಿ, ಅವಣ್ಣ ಮ್ಯಾಕೇರಿ, ಸಂತೋಷ ಹಾದಿಮನಿ, ಸಂತೋಷ ತಳವಾರ, ಬಾಬುರಾವ ಹಾಗರಗುಂಡಗಿ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!