2022 ರಲ್ಲಿ NIA ದಾಖಲಿಸಿದೆ ಬರೋಬ್ಬರಿ 73 ಪ್ರಕರಣಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದಲ್ಲಿ 2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಒಟ್ಟು 73 ಪ್ರಕರಣಗಳನ್ನು ದಾಖಲಿಸಿದೆ. 2021 ಗಿಂತ 19.67% ಹೆಚ್ಚಳವಾಗಿದ್ದು, ಇದು ಎನ್ಐಎ ಇತಿಹಾಸದಲ್ಲೇ ಅತೀ ಹೆಚ್ಚು ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿದೆ.

73 ಪ್ರಕರಣಗಳಲ್ಲಿ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ಬಿಹಾರ, ದೆಹಲಿ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಜಿಹಾದಿಯಂತಹ 35 ಪ್ರಕರಣಗಳು ಒಳಗೊಂಡಿವೆ ಎಂದು ಎಂದು NIA ಮಾಹಿತಿ ನೀಡಿದೆ.

ಅದೇ ರೀತಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿ 11 ಪ್ರಕರಣಗಳ ,ಎಡಪಂಥೀಯ ಉಗ್ರವಾದ (LWE) 10 ಪ್ರಕರಣಗಳು, NE ನಲ್ಲಿ 5 ಪ್ರಕರಣಗಳು ಪ್ರಕರಣಗಳು ಸೇರಿವೆ. 7 PFI ಸಂಬಂಧಿತ ಪ್ರಕರಣಗಳು, ಪಂಜಾಬ್‌ನ 5 ಪ್ರಕರಣಗಳು ಒಳಗೊಂಡಿದ್ದು, ಈ ಪೈಕಿ ದರೋಡೆಕೋರ-ಭಯೋತ್ಪಾದನೆ-ಮಾದಕ ಕಳ್ಳಸಾಗಣೆದಾರರ ಸಂಬಂಧದ 3 ಪ್ರಕರಣಗಳು ಭಯೋತ್ಪಾದಕ-ಧನಸಹಾಯದ 1 ಪ್ರಕರಣ ಮತ್ತು 2 ಎಫ್‌ಐಸಿಎನ್ ಸಂಬಂಧಿತ ಪ್ರಕರಣಗಳು ಸೇರಿವೆ.

ಹಾಗೆಯೇ 2022 ರಲ್ಲಿ 368 ಜನರ ವಿರುದ್ಧ 59 ಆರೋಪಪಟ್ಟಿಗಳನ್ನು ಸಲ್ಲಿಸಿದೆ. 456 ಆರೋಪಿಗಳನ್ನು ಬಂಧಿಸಿದೆ. ಇನ್ನು 38 ಪ್ರಕರಣಗಳಲ್ಲಿ ತೀರ್ಪುಗಳನ್ನು ನೀಡಲಾಗಿದ್ದು, 109 ವ್ಯಕ್ತಿಗಳಿಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಆರು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ನೀಡಲಾಗಿದೆ ಎಂದು ಮಾಹಿತಿ ನೀಡಿದೆ.

ಯುಎಪಿಎ ಅಡಿಯಲ್ಲಿ 8 ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗೊತ್ತುಪಡಿಸಲಾಗಿದ್ದು, ಅವರ ವಿರುದ್ಧ ಅಗತ್ಯ ಕ್ರಮವನ್ನು ಎನ್ಐಎ ತೆಗೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ದೆಹಲಿಯ ಹೋಟೆಲ್ ತಾಜ್ ಪ್ಯಾಲೇಸ್ ನಲ್ಲಿ ಮೂರನೇ ‘ ನೋ ಮನಿ ಫಾರ್ ಟೆರರ್ ‘ (ಎನ್ ಎಂಎಫ್ ಟಿ) ಭಯೋತ್ಪಾದನಾ ನಿಗ್ರಹ ಹಣಕಾಸು ಸಮ್ಮೇಳನವನ್ನು ನವೆಂಬರ್ 2022ರ ನವೆಂಬರ್ 18 ಹಾಗೂ19ರಂದು ಯಶಸ್ವಿಯಾಗಿ ನಡೆಸಿತ್ತು. ಇದರಲ್ಲಿ 78 ದೇಶಗಳು ಮತ್ತು 16 ಬಹುಪಕ್ಷೀಯ ಸಂಸ್ಥೆಗಳು ಭಾಗವಹಿಸಿದ್ದವು ಎಂದು ಎನ್​ಐಎ 2022ರ ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!