Saturday, February 4, 2023

Latest Posts

ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತಕ್ಕೆ ಮೊದಲ ಬೆಳ್ಳಿ ಪದಕ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಕೊನೇರು ಹಂಪಿ ಅವರು ಭಾರತಕ್ಕೆ ಮೊದಲ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಮಾಜಿ ವಿಶ್ವ ರ್ಯಾಪಿಡ್ ಚಾಂಪಿಯನ್ ಆಗಿದ್ದ ಕೊನೇರು ಹಂಪಿ ಅವರು ಕಜಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಚಾಂಪಿಯನ್‌ ಶಿಪ್‌ ನಲ್ಲಿ 17ನೇ ಮತ್ತು ಅಂತಿಮ ಸುತ್ತಿನಲ್ಲಿ ಚೀನಾದ ಝೊಂಗಿ ಟಾನ್ ಅವರನ್ನು ಸೋಲಿಸಿ ಬೆಳ್ಳಿ ಗೆದ್ದರು.
ನಾಲ್ಕನೇ ಶ್ರೇಯಾಂಕದ ಹಂಪಿ ಆಕರ್ಷಕ 12.5 ಪಾಯಿಂಟ್‌ಗಳನ್ನು ಗಳಿಸಿದರು, ಚಿನ್ನದ ಪದಕ ವಿಜೇತ ಕಜಕಸ್ತಾನದ ಬಿಬಿಸಾರ ಬಾಲಬಯೇವಾ ಅವರಿಗಿಂತ ಕೇವಲ ಅರ್ಧ ಪಾಯಿಂಟ್‌ ಹಿಂದೆ ಇದ್ದರು.
ವಿಶ್ವನಾಥನ್ ಆನಂದ್ ನಂತರ ವಿಶ್ವ ಬ್ಲಿಟ್ಜ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಹಂಪಿ ಪಾತ್ರರಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!