Monday, October 2, 2023

Latest Posts

ರಾಜ್ಯದಲ್ಲಿ ಮುಂದುವರೆದ ಗ್ಯಾರಂಟಿ ತರಾಟೆ: ಹಾಸನದಲ್ಲಿ ಕೆಇಬಿ ಸಿಬ್ಬಂದಿ ಮೇಲೆ ಹಲ್ಲೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಗ್ರೆಸ್‌ ಸರ್ಕಾರ 200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಹಲವಡೆ ವಿದ್ಯುತ್ ಬಿಲ್ ಪಾವತಿಸಲು ಜನರು ನಿರಾಕರಿಸುತ್ತಿದ್ದು, ಕೆಲವಡೆ ಬಿಲ್ ಕಲೆಕ್ಷನ್ ಗೆ ಹೋದ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆಗಳು ವರದಿಯಾಗಿವೆ. ಅದೇ ರೀತಿಯಾದ ಘಟನೆಯೊಂದು ಹಾಸನದಲ್ಲೂ ಕೂಡ ನಡೆದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ, ಹಳೇ ಕೋರ್ಟ್ ರಸ್ತೆಯಲ್ಲಿರುವ ಕೋಳಿ ಅಂಗಡಿ ಮಾಲೀಕ ಸುರೇಶ್ ಎಂಬುವರು ಬಿಲ್ ಕಲೆಕ್ಷನ್‌ಗೆ ಬಂದಿದ್ದ ಚೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ‌.

ಚೆಸ್ಕಾಂ ಸಿಬ್ಬಂದಿ ಸಂತೋಷ್, ಸುರೇಶ್ ಮನೆ ಬಳಿ ತೆರಳಿ ಬಾಕಿ 1,150 ರೂ. ವಿದ್ಯುತ್ ಬಿಲ್ ಪಾವತಿಸುವಂತೆ ಕೇಳಿದ್ದಾರೆ. ಆದರೆ ಸುರೇಶ್‌ ನಾವು ಹಣ ಕಟ್ಟಲ್ಲ, ಸರ್ಕಾರ ಹೇಳಿದೆ ಆದರೂ ಬಿಲ್ ಕೇಳಲು ಬಂದಿದ್ದೀಯಾ ಅಂತಾ ಚೆಸ್ಕಾಂ ಸಿಬ್ಬಂದಿಯನ್ನ ನಿಂದಿಸಿ ಸುರೇಶ್ ಹಾಗೂ ಆತನ ಅಪ್ರಾಪ್ತ ಪುತ್ರ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಸಂತೋಷ್ ಆರೋಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!